HomePage_Banner_
HomePage_Banner_

ಉದ್ಯೋಗ ಖಾತರಿ ಯೋಜನೆಯ ಅತ್ಯುತ್ತಮ ಅನುಷ್ಠಾನ : ತಾಲೂಕಿನ ಮೂವರು ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ದ.ಕ ಜಿಲ್ಲೆ ಮತ್ತು ತಾಲೂಕಿಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು 2019-20 ಹಾಗೂ ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಿದ  ಬೆಳ್ತಂಗಡಿ ತಾಲೂಕಿನ ಮೂವರು ಅಧಿಕಾರಿಗಳು  ಪ್ರಶಸ್ತಿಗೆ ಪಾತ್ರರಾಗಿದ್ದು, ನ.12 ರಂದು ಮೂಡಬಿದ್ರೆ ತಾಲೂಕಿನ ಪುತ್ತಿಗೆ ಗ್ರಾ.ಪಂ ಆವರಣದಲ್ಲಿ ನಡೆಯಲಿರುವ ನೂತನ ಘನತ್ಯಾಜ್ಯ ಘಟಕ ಉದ್ಘಾಟನೆ ಹಾಗೂ ಸ್ವಚ್ಛ ಸಂಕೀರ್ಣ ಏಕರೂಪದ ಬ್ರಾಂಡಿಂಗ್ ಲೋಕಾರ್ಪಣೆ ಹಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಎಂಎನ್‌ಆರ್‌ಇಜಿಎ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಅಂಡಿಂಜೆ ಗ್ರಾಮ ಪಂಚಾಯತದ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಹಾಗೂ ಬೆಳ್ತಂಗಡಿ ತಾ.ಪಂ. ತಾಂತ್ರಿಕ ಸಂಯೋಜಕ ರುತೇಶ್ ಎಂ.ಜೆ ಇವರುಗಳಿಗೆ ವೇದಿಕಯಲ್ಲಿರುವ ಗಣ್ಯರು  ಪ್ರಶಸ್ತಿ ಪ್ರದಾನ ಮಾಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.