HomePage_Banner_
HomePage_Banner_

ಹಂಸ ಎಲೆಕ್ಟ್ರಾನಿಕ್ಸ್ ಹೋಮ್ ಅಪ್ಲಯನ್ಸಸ್ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಸುವರ್ಣ ಆರ್ಕೇಡ್ ಮತ್ತು ಬೆಳ್ತಂಗಡಿ ಸಂತೆಕಟ್ಟೆ ಬಳಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಂಸ ಫರ್ನಿಚರ್‍ಸ್‌ನ ಸಹಸಂಸ್ಥೆ ಐಡಿಯಲ್ ಕಾಂಪ್ಲೇಕ್ಸ್‌ನಲ್ಲಿ ಹಂಸ ಎಲೆಕ್ಟ್ರಾನಿಕ್ಸ್ ಹೋಮ್ ಅಪ್ಲಯನ್ಸಸ್ & ಫರ್ನಿಚರ್‍ಸ್ ನ.12 ರಂದು ಬೆಳಿಗ್ಗೆ 10.48ಕ್ಕೆ ಶುಭಾರಂಭಗೊಂಡಿತು.

ಪಟ್ಟಣ ಪಂಚಾಯತು ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಾ ಹಾರೈಸಿದರು. ಈ ಸಂದರ್ಭ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಸುವರ್ಣ ಆರ್ಕೆಡ್ ಮಾಲಕ ವೈ ನಾಣ್ಯಪ್ಪ ಪೂಜಾರಿ, ಪ್ರಜ್ವಲ್ ಕಾಂಪ್ಲೆಕ್ಸ್ ನ ಮಾಲಕ ಪ್ರಮೋದ್ ಕುಮಾರ್, ಪಟ್ಟಣ ಪಂಚಾಯತ್ ವಾರ್ಡ್ ಸದಸ್ಯ ಶರತ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು. ಮಾಲಕರಾದ ಬಿ.ಕೆ ಸತೀಶ್ ಆಚಾರ್ಯ ಶ್ರೀಮತಿ ಆಶಾ ಸತೀಶ್, ಬಿ.ಎಸ್ ನಿತೀಶ್, ಆಗಮಿಸಿದ್ದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಗ್ರೈಂಡರ್, ಮಿಕ್ಸಿ, ಇಸ್ತ್ರಿ ಪೆಟ್ಟಿಗೆ, ಫ್ಯಾನ್, ಕೂಲರ್, ತವಾ ಇನ್ನಿತರ ಗೃಹಪಯೋಗಿ ವಸ್ತುಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಸೋಫಾ ಸೆಟ್, ಡೈನಿಂಗ್ ಟೇಬಲ್, ಟೀಪಾಯಿ, ಮರದ ಡೋರ್, ಮುಖದ್ವಾರ, ದೇವರ ಕೋಣೆಯ ಡಿಸೈನ್ ಡೋರ್‌ಗಳು, ಕಪಾಟು, ದಿವಾನ, ಟಿ.ವಿ ಟ್ರಾಲಿಗಳು ಲಭ್ಯವಿದೆ. ಉದ್ಘಾಟನಾ ಸಮಾರಂಭ ಪ್ರಯುಕ್ತ ವಿಶೇಷ ರಿಯಾಯಿತಿ ನಿಮ್ಮದಾಗಿಸಲು ಸುವರ್ಣವಕಾಶ, ಉಚಿತ ಸಾಗಾಟ ಮಾಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.