ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: 12 ಕ್ಷೇತ್ರಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಆಯ್ಕೆಗೆ ನ.10ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಸ್ಪರ್ಧಿಸಿದ 12 ಕ್ಷೇತ್ರಗಳಲ್ಲಿ 12 ಮಂದಿ ಅಭ್ಯರ್ಥಿಗಳೂ ಗೆಲುವು ಸಾಧಿಸುವುದರೊಂದಿಗೆ ಸಂಘದ ಆಡಳಿತದ ಗದ್ದುಗೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೆ.ಆರ್, ಹಿಂದುಳಿದ ವರ್ಗ ಎ’ ಕ್ಷೇತ್ರದಿಂದ ನಿಕಟಪೂರ್ವ ಉಪಾಧ್ಯಕ್ಷ ಶೇಷಪ್ಪ ಸಾಲ್ಯಾನ್, ಸಾಮಾನ್ಯ ಕ್ಷೇತ್ರದಿಂದ ರಾಜೇಶ್ ರೈ, ಪ್ರವೀಣ್ ರೈ ಪಿ, ಪ್ರಸನ್ನ ಎನ್, ಪ್ರತಾಪ್ ಎಂ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅಣ್ಣು ಪಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಶಿವರಾಮ, ಹಿಂದುಳಿದ ವರ್ಗ ಎ’ಕ್ಷೇತ್ರದಿಂದ ಅಶ್ರಫ್ ಹೆಚ್, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಸವಿತಾ ಮತ್ತು ಶ್ರೀಮತಿ ಲಿಡಿಯಾ ಬ್ರಾಗ್ಸ್, ಸಾಲಗಾರರಲ್ಲದ ಕ್ಷೇತ್ರದಿಂದ ಪಾರ್ಶ್ವನಾಥ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ನವೀನ್ ಕುಮಾರ್ ಎಂ.ಎಸ್ ಕಾರ್ಯನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.