HomePage_Banner_
HomePage_Banner_

ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಅವಿರೋಧ ಆಯ್ಕೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನ.15ರಂದು ನಿಗಧಿಯಾದ ಚುನಾವಣೆಯಲ್ಲಿ ನ.8ರಂದು ನಾಮಪತ್ರ ಪರಿಶೀಲನೆ ನಡೆದಿದ್ದು. ನಾಮಪತ್ರ ಕ್ರಮಬದ್ಧವಾಗಿದ್ದು 11 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಗ್ರೆಗೋರಿ ಸೇರಾ, ಜೋಯಲ್ ಗೊಡ್‌ಫ್ರಿ ಮೆಂಡೋನ್ಸಾ, ರೊನಾಲ್ಡ್ ಸಿಕ್ವೇರಾ, ಲಿಯೋ ರೊಡ್ರಿಗಸ್, ಲೆನ್ಸಿ ಪಿಂಟೊ, ವಿವೇಕ್ ವಿನ್ಸೆಂಟ್ ಪಾಯ್ಸ್, ಸಿರಿಲ್ ಸಿಕ್ವೇರಾ, ಹ್ಯೂಬರ್ಟ್ ಲೋಬೊ, ಹೆನ್ರಿ ಮೊರಾಸ್, ಮಹಿಳಾ ಮೀಸಲು ಸ್ಥಾನದಿಂದ ಗ್ರೇಸಿ ರೀಟಾ ರೆಬೆಲ್ಲೊ, ಸೆಲೆಸ್ತಿನ್ ಡಿಸೋಜ ಇವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸುಕನ್ಯಾ ಭಾಗವಹಿಸಿ, ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ನ.೧೫ರಂದು ನಡೆಯಬೇಕಿದ್ದ ಚುನಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.