HomePage_Banner_
HomePage_Banner_

ಬೆಳ್ತಂಗಡಿ ಜೈನ್ ಮಿಲನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಜಿರೆ: ಭಾರತೀಯ ಜೈನ್ ಮಿಲನ್ ವಲಯ 8ರ ಬೆಳ್ತಂಗಡಿ ಶಾಖೆಯ 2020-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶ್ರೀ ಧ. ಮಂ. ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಭವನದಲ್ಲಿ ಜರಗಿತು.
ಮುಖ್ಯ ಅತಿಥಿ ವಲಯದ ಉಪಾಧ್ಯಕ್ಷರಾದ ವೀರ್ ಬಿ. ಸುದರ್ಶನ್ ಜೈನ್ ಆಗಮಿಸಿ ಜೈನ್ ಮಿಲನ್ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ವಲಯ 8ರ ನಿರ್ದೇಶಕ ವೀರ್ ಬಿ. ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಕರ್ತವ್ಯಗಳ ಬಗ್ಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವೀರ್ ಪಾರ್ಶ್ವನಾಥ್ ಜೈನ್ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ವೀರ್ ಎನ್. ಶಾಂತಿರಾಜ್ ಜೈನ್, ಕಾರ್ಯದರ್ಶಿಯಾಗಿ ವೀರ್ ಸಂಪತ್ ಕುಮಾರ್ ಉಪಾಧ್ಯಕ್ಷರಾಗಿ ವೀರ್.ಕೆ ಉದಯ್ ಕುಮಾರ್ ಕಂಬಳಿ, ವೀರ್ ಸಿದ್ಧಾಂತ ಕೀರ್ತಿರಾಜ್, ವೀರಾಂಗನಾ ಶ್ರೀಮತಿ ಶಕುಂತಳಾ, ಜೊತೆ ಕಾರ್ಯದರ್ಶಿಯಾಗಿ ವೀರ್ ಅಜಯ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ವೀರ್ ನಿಖಿತ್ ಜೈನ್, ಧರ್ಮಸ್ಥಳ ಪ್ರಮಾಣ ವಚನ ಸ್ವೀಕರಿಸಿದರು. ವೀರ್ ಅನಂತ್ರಾಜ್ ಜೈನ್, ವೀರ್ ಬಿ. ಭುಜಬಲಿ, ವೀರ್ ಎನ್. ಜೀವಂಧರ್ ಕುಮಾರ್, ವೀರಾಂಗನಾ ಪ್ರೊ. ತ್ರಿಶಲಾ ಜೈನ್, ವೀರ್ ಪೊ. ದಿನೇಶ್ ಚೌಟ, ವೀರ್ ಡಾ. ಎಸ್. ಸತೀಶ್ಚಂದ್ರ ಗೌರವ ಸಲಹೆಗಾರರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವೀರ್ ಪ್ರವೀಣ್ ಕುಮಾರ್ ಇಂದ್ರ, ವೀರ್ ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ವೀರ್ ಬಿ. ಮುನಿರಾಜ್ ಅಜ್ರಿ ನಿರೂಪಿಸಿ, ಸಂಪತ್ ಕುಮಾರ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.