HomePage_Banner_
HomePage_Banner_

ಬೆಳ್ತಂಗಡಿ ಜೈನ್ ಮಿಲನ್‌ಗೆ ದಾಖಲೆ ಸಂಖ್ಯೆಯಲ್ಲಿ ನೂತನ ಸದಸ್ಯರ ಸೇರ್ಪಡೆ

ಉಜಿರೆ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ಸುಮಾರು 35 ಸದಸ್ಯರು ಸೇರ್ಪಡೆಗೊಂಡು ಮಿಲನ್ ನಿಯಮದಂತೆ ಪ್ರತಿಜ್ಞೆ ಸ್ವೀಕರಿಸಿದರು. ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ವಲಯ-8 ರ ಉಪಾಧ್ಯಕ್ಷರಾದ ವೀರ್ ಸುದರ್ಶನ ಜೈನ್ ಮಾತಾಡಿ ಮಿಲನ್ ಬೆಳೇದು ಬಂದ ರೀತಿ, ವಲಯ -8 ರ ವ್ಯಾಪ್ತಿ, ಅಧ್ಯಕ್ಷರ, ಕಾರ್ಯದರ್ಶಿಗಳ ಹೊಣೆಗಾರಿಕೆ, ಕರ್ತವ್ಯ, ಸದಸ್ಯರ ಜವಾಬ್ದಾರಿಯನ್ನು ವಿವರಿಸಿ ತಿಳಿಸಿದರು. ಪೂರ್ವಾಧ್ಯಕ್ಷರಾದ ವೀರ್ ಜೀವಂಧರ ಜೈನ್, ವೀರ್ ಎ.ಕೀಶೋರ್ ಹೆಗ್ಡೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎನ್.ಶಾಂತಿರಾಜ ಜೈನ್ ಉಪಾಧ್ಯಕ್ಷರಾದ ವೀರ್ ಸಿದ್ದಾಂತ್, ಕೀರ್ತಿರಾಜ್ ಕಾರ್ಯದರ್ಶಿ ಸಂಪತ್ ಜೈನ್, ಜೊತೆ ಕಾರ್ಯದರ್ಶಿ ಅಜಯ್ ಕುಮಾರ್,ಕೋಶಾಧಿಕಾರಿ ನಿಖಿತ್ ಜೈನ್, ಸಂಘಟಿಸಿದ ಕಾರ್ಯಕ್ರಮದಲ್ಲಿ ವೀರ್ ಪ್ರವೀಣ್ ಕುಮಾರ್ ಇಂದ್ರ, ವೀರ್ ಎ., ಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷರಾದ ವೀರ್ ಡಾ| ಬಿ.ಯಶೋವರ್ಮರ ಮಾರ್ಗದರ್ಶನದಲ್ಲಿ ನಿರ್ದೇಶಕ ವೀರ್ ಬಿ.ಸೋಮಶೇಖರ್, ವೀರ್ ಪ್ರೊ. ದಿನೇಶ್ ಚೌಟ ಪ್ರಾಂಶುಪಾಲರು, ವೀರ್ ಯುವರಾಜ ಜೈನ್‌ರ ಸೂಚನೆಯಂತೆ ನೂತನ ಸದಸ್ಯರ ಸೇರ್ಪಡೆಯಾಯಿತು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.