HomePage_Banner_
HomePage_Banner_

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕುತ್ಲೂರು-ಅಲಂಬದಲ್ಲಿ ವಿಶೇಷ ರೋಜ್ ಗಾರ್ ಸಭೆ

ಕುತ್ಲೂರು: ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಕುತ್ಲೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಲಂಬ – ಕುರಿಯಾಡಿ ಅಂಗನವಾಡಿಯಲ್ಲಿ, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಐಇಸಿ ಚಟುವಟಿಕೆಯಡಿ ವಿಶೇಷ ರೋಜ್ ಗಾರ್ ಸಭೆ ನಡೆಯಿತು.


ಈ ವಿಶೇಷ ರೋಜ್ ಗಾರ್ ಸಭೆಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಧರ.ಬಿ ಅವರು ಆಗಮಿಸಿ, ಮಲೆ ಮಕ್ಕಳಿಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಕುತ್ಲೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಲಂಬ – ಕುರಿಯಾಡಿಯಲ್ಲಿ ಸುಮಾರು 32 ಪ.ಪಂಗಡದ ಕುಟುಂಬಗಳು ವಾಸಿಸುತ್ತಿದ್ದು, ಇವರು ತಮ್ಮ ಜೀವನೋಪಾಯಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಹಾಗಾಗಿ ಇಲ್ಲಿನ ಕುಟುಂಬದ ಸದಸ್ಯರಿಗೆ ಅಗತ್ಯವಾಗಿ ಬೇಕಾಗುವಂತೆ, ಸರಕಾರದ ಮಹತ್ವದ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಿಗುವ ಸವಲತ್ತುಗಳ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಯವರು ಸಮಗ್ರ ಮಾಹಿತಿ ಒದಗಿಸಿದರು.


ಬಳಿಕ ಮಾತನಾಡಿದ ಅವರು, ಉದ್ಯೋಗ ಖಾತರಿ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸ ಹಾಗೂ 275 ರಂತೆ ದಿನವೊಂದಕ್ಕೆ ಹೆಣ್ಣು-ಗಂಡಿಗೆ ಸಮಾನ ಕೂಲಿ ಪಾವತಿ ಮಾಡಲಾಗುತ್ತಿದೆ. ಅಲ್ಲದೇ ಕೃಷಿ ಚಟುವಟಿಕೆಗಳಿಗೆ ವಿಶೇಷ ಅನುದಾನ ದೊರೆಯುತ್ತಿದ್ದು, ಅಡಿಕೆ, ತೆಂಗು, ಕಾಳು ಮೆಣಸು, ಕೊಕ್ಕೋ, ಕೃಷಿ ಹೊಂಡ ದನದ ಹಟ್ಟಿ ಸೇರಿದಂತೆ ಹಲವಾರು ವೈಯಕ್ತಿಕ ಕಾಮಗಾರಿಗೆ ಅವಕಾಶವಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಅಲಂಬ ಪರಿಸರದ ಜನತೆಗೆ ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಇನ್ನಿತರೇ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸಿದ ಕಾರ್ಯನಿರ್ವಾಹ ಅಧಿಕಾರಿಯವರು, ಕೂಡಲೇ ಸರ್ಕಾರದ ಮಟ್ಟಕ್ಕೆ ಸಲ್ಲಿಸಿ, ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಎಸ್.ಎಂ, ಮ.ಗಾ.ರಾ.ಗ್ರಾ.ಉ.ಖಾತರಿ ಯೋಜನೆಯೆ ಐಇಸಿ ಸಂಯೋಜಕಿ ಶ್ರೀಮತಿ ಸುನೀತಾ ಹಾಗೂ ಪಂಚಾಯತ್ ಕಾರ್ಯದರ್ಶಿ ನಿರ್ಮಲ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪಂಚಾಯತ್ ಸಿಬ್ಬಂದಿಗಳು ಹಾಗೂ ಆ ವ್ಯಾಪ್ತಿಯಲ್ಲಿ ವಾಸ ಮಾಡುವ 32 ಕುಟುಂಬದ ಪ್ರತೀ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.