HomePage_Banner_
HomePage_Banner_

ಕೊಯ್ಯೂರು: ಸಾಧಕರಿಗೆ ಹುಟ್ಟೂರ ಅಭಿನಂದನೆ ಸಮಾರಂಭ

ಕೊಯ್ಯೂರು :ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ  ಕೊಯ್ಯೂರಿನ ಸಾಧಕರಿಗೆ ಹಾಗೂ ನಿವೃತ್ತ ಶಿಕ್ಷಕಿಯರಿಗೆ ‘ಹುಟ್ಟೂರ ಅಭಿನಂದನೆ ಸಮಾರಂಭವು’  ಕೊಯ್ಯೂರಿನ ‘ಶ್ರೀ ಪಂಚದುರ್ಗಾ ಸಹಕಾರಿ ಭವನ’ದಲ್ಲಿ ನಡೆಯಿತು.

ನಡ ಸರಕಾರಿ ಪ್ರೌಢ ಶಾಲಾ ಶಿಕ್ಷಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ  ಪಡೆದ ಯಾಕುಬ್ ಕೊಯ್ಯೂರು ,  ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲಾ ಮಟ್ಟದಲ್ಲಿ 4 ನೇ ಸ್ಥಾನ ಪಡೆದೆ ಕು.ಶೈವಿ ಬಿ.ಕೊಯ್ಯೂರು, ಅದೂರು ಪೇರಾಲ್ ಸ. ಹಿ.ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ, ನಿವೃತ್ತ ಶಿಕ್ಷಕಿ ಜಾಹ್ನವಿ, ಕ್ರೀಡೆಯಲ್ಲಿ  ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಕು|ಮುಸ್ತೀರಾ ಭಾನು ಇವರುಗಳನ್ನು  ಶಾಸಕ ಹರೀಶ್ ಪೂಂಜ  ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.

 

ಕೊಯ್ಯೂರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಕುಮಾರ್ ಅಗ್ರಸಾಲೆ , ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ತಾ.ಪಂ ಸದಸ್ಯ ಪ್ರವೀಣ್ ಗೌಡ , ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊಯ್ಯೂರು ಪ್ರೌಢ ಶಾಲಾ ಶಿಕ್ಷಕರನ್ನು  ಹಾಗೂ ಕೊಯ್ಯೂರು ಪ್ರೌಢಶಾಲೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಕು.ಅಶ್ವಿನಿ, ದೀಪಕ್,ಸ್ಮೀತಾ ಮತ್ತು ಸುಶ್ಮಾ ಇವರುಗಳನ್ನು  ಗೌರವಿಸಲಾಯಿತು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.