ಬೆಳ್ತಂಗಡಿ ರೋಟರಿ ಕ್ಲಬ್ ನಿಂದ  ‘ಪ್ರಕಾಶ ಗಾನಾಂಜಲಿ’ ಹಾಡುಗಾರಿಕಾ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಲಯ 4 ರ ಕ್ಲಬ್ ಗಳ ಹಾಡುಗಾರಿಕಾ ಸ್ಪರ್ಧೆ ‘ಪ್ರಕಾಶ ಗಾನಾಂಜಲಿ’ ಕಾರ್ಯಕ್ರಮವು ಬೆಳ್ತಂಗಡಿ  ಸುಬ್ರಹ್ಮಣ್ಯ ಸದನದಲ್ಲಿ ಜರುಗಿತು.

ಇತ್ತೀಚೆಗೆ ನಿಧನರಾದ ಗಾಯಕ ಪ್ರಕಾಶ್ ತುಳುಪುಳೆ ಯವರ ನೆನಪಿನಲ್ಲಿ ಈ ಸ್ಪರ್ಧೆಯನ್ನು ಅಯೋಜಿಸಿ ಇದಕ್ಕೆ ಪ್ರಕಾಶ ಗಾನಂಜಲಿ ಎಂದು ಹೆಸರಿಸಲಾಗಿತ್ತು‌.

ಕಾರ್ಯಕ್ರಮವನ್ನು ದಿ| ಪ್ರಕಾಶ ತುಳುಪುಳೆಯವರ ಸಹೋದರ  ಡಾ. ಎನ್.ಎಂ.ತುಳುಪುಳೆಯವರು ಉದ್ಘಾಟಿಸಿದರು.  ರೋಟರಿ ಜಿಲ್ಲೆಯ ಸಿಂಗಿಂಗ್ ಐಡಲ್ ಚೇರ್ಮನ್ ವಿ.ಜೆ.ಫರ್ನಾಂಡೀಸ್ , ಜೋನಲ್ ಲೆಫ್ಟಿನೆಂಟ್ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಬೆಳ್ತಂಗಡಿ ರೋಟರಿಯ ಪೂರ್ವಾಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಕ್ಲಬ್ ನ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ಕ್ಲಬ್ ಸರ್ವಿಸಸ್ ನ ನಿರ್ದೇಶಕ  ಯೋಗೀಶ್ ಭಿಡೆ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಜಿಲ್ಲೆ 3181 ,ವಲಯ 4 ರ ಸಮಾರು 10 ಕ್ಲಬ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು

ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್  ಪ್ರಸ್ತಾವಿಸಿ , ಸ್ವಾಗತಿಸಿದರು.  ಗಾಯಕರಾದ ಸುಬ್ರಹ್ಮಣ್ಯ, ರಜತ್ ಮಯ್ಯ ಹಾಗೂ  ಸ್ವರ್ಣ ಕುಮಾರಿ ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದರು.  ಕ್ಲಬ್ ನ ಕಾರ್ಯದರ್ಶಿ ಶ್ರೀಧರ ಕೆವಿ ವಂದಿಸಿದರು.

ಈ ಸಂಧರ್ಭದಲ್ಲಿ ಉಜಿರೆಯ ರವಿಚಂದ್ರ ಚೆಕ್ಕಿತ್ತಾಯ, ಅರವಿಂದ ಕಾರಂತ, ವಿವೇಕ ಸಂಪತ್ ಆರಿಗ, ಸುಹಾಸ್ ಕುಮಾರ್ ಎಸ್ ಹಾಗೂ ಬೆಳ್ತಂಗಡಿಯ ರೊನಾಲ್ಡೊ ಲೋಬೋ ಅವರನ್ನು ರೋಟರಿ ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.