ಕಾಶಿಪಟ್ಣ: ಸೇವ್‌ಲೈಫ್ ಚಾರಿಟೇಬಲ್ ಟ್ರಸ್ಟ್‌ನಿಂದ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಾಣ

ಕಾಶಿಪಟ್ಣ: ಮಂಗಳೂರು ಸೇವ್‌ಲೈಫ್ ಚಾರಿಟೇಬಲ್ ಟ್ರಸ್ಟ್‌ನಿಂದ ಕಾಶಿಪಟ್ಣ ಗ್ರಾಮದ ನಿವಾಸಿ ಅಪ್ಪಿ ಪೂಜಾರ್ತಿ ಅವರ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕ ರವೀಂದ್ರ ಅವರು ಕಾಶಿಪಟ್ಣ ಗ್ರಾಮದ ಅಪ್ಪಿ ಪೂಜಾರ್ತಿ ಕುಟುಂಬ ಶೌಚಾಲಯವಿಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಗ್ರಾಮಸ್ಥರಿಂದ ತಿಳಿದು ವಿಪತ್ತು ನಿರ್ವಹಣೆ ಸಂಯೋಜಕಿ ಜಯಶೀಲ ಅವರಿಗೆ ಮಾಹಿತಿಯನ್ನು ನೀಡಿದ್ದರು. ಅವರು ಅಪ್ಪಿ ಪೂಜಾರ್ತಿ ಅವರ ಮನೆಗೆ ಭೇಟಿ ಮಾಡಿ ಕುಟುಂಬದ ಪರಿಸ್ಥಿತಿಯನ್ನು ಅರಿತುಕೊಂಡು ಮಂಗಳೂರು ಸೇವ್‌ಲೈಫ್ ಚಾರಿಟೇಬಲ್ ಟ್ರಸ್ಟ್‌ನಿಂದ ರೂ. ೨೫ ಸಾವಿರ ಮೊತ್ತವನ್ನು ಶೌಚಾಲಯ ನಿರ್ಮಿಸಲು ಸಹಾಯಧನ ಒದಗಿಸುವಲ್ಲಿ ಸಹಕರಿಸಿದರು.
ಬಡ ಕುಟುಂಬ
ಅಪ್ಪಿ ಪೂಜಾರ್ತಿ ಅವರದು ತೀರಾ ಬಡಕುಟುಂಬ. ಸರಿಯಾದ ಸೂರಿನ ವ್ಯವಸ್ಥೆಯೂ ಇವರಿಗಿಲ್ಲ. ಮೂವರು ಹೆಣ್ಣುಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದು, ಎಲ್ಲಾ ಖರ್ಚನ್ನೂ ಅಪ್ಪಿ ಪೂಜಾರ್ತಿ ಒಬ್ಬರೇ ನಿಬಾಯಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.