ವೇಣೂರು ಬಾಹುಬಲಿ ಕ್ಷೇತ್ರ: ಹೈಮಾಸ್ಟ್ ದೀಪಗಳ ಉದ್ಘಾಟನೆ

ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀಲನಕಾಶೆ: ಶಾಸಕ ಪೂಂಜ

ವೇಣೂರು: ಇತಿಹಾಸ ಪ್ರಸಿದ್ಧ ವೇಣೂರಿನ ಕಲ್ಲುಬಸದಿ ಹಾಗೂ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ಬಳಿಯಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಮುಂಭಾಗದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ಎರಡು ಹೈಮಾಸ್ಟ್ ದೀಪಗಳನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ಬಳಿಕ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಚಾತುರ್ಮಾಸ ವರ್ಷಾಯೋಗವನ್ನು ಆಚರಿಸುತ್ತಿರುವ 108 ದಿವ್ಯಸಾಗರ ಮಹಾರಾಜರಿಗೆ ಶ್ರೀಫಲವನ್ನು ಸಮರ್ಪಿಸಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಯಾತ್ರಿನಿವಾಸಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿರುವ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕೇಂದ್ರಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಿ ಅಭಿವೃದ್ಧಿ ಪಡಿಸಲು ನೀಲನಕಾಶೆ ತಯಾರಿಸಲಾಗುತ್ತಿದೆ. ಇಂತಹ ಪ್ರವಾಸಿ ತಾಣಗಳಲ್ಲಿ ವೇಣೂರು ಬಾಹುಬಲಿ ಕ್ಷೇತ್ರವೂ ಸೇರಿದ್ದು, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸೀಮೆಯ ಅರಸರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ದಾ| ಪದ್ಮಪ್ರಸಾದ ಅಜಿಲರು ವಹಿಸಿದ್ದರು.
ಸಮ್ಮಾನ
ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಹಾಗೂ ಬಾಹುಬಲಿ ಯುವಜನ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರನ್ನು ಸಮ್ಮಾನಿಸಲಾಯಿತು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಅರುಣ್ ಹೆಗ್ಡೆ, ಸದಸ್ಯರಾದ ವಿ. ನೇಮಯ್ಯ ಕುಲಾಲ್, ಯಶೋಧರ ಹೆಗ್ಡೆ, ಲೋಕಯ್ಯ ಪೂಜಾರಿ, ಹರೀಶ್ ಪಿ.ಎಸ್., ಲಕ್ಷ್ಮಣ ಪೂಜಾರಿ, ರಾಜೇಶ್ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಪ್ರಮುಖರಾದ ನವೀನ್‌ಚಂದ್ ಬಳ್ಳಾಲ್, ಡಾ| ಕೆ.ಆರ್. ಪ್ರಸಾದ್, ಡಾ| ಶಾಂತಿಪ್ರಸಾದ್, ಪ್ರವೀಣ್ ಅಜ್ರಿ, ಪ್ರವೀಣ್ ಕುಮಾರ್ ಇಂದ್ರ, ಪ್ರಶಾಂತ್ ಕುಮಾರ್, ಸುರೇಶ್ ಆರಿಗ, ಭರತ್‌ರಾಜ್ ಮುದ್ಯ, ಬಿಜೆಪಿ ಪ್ರಮುಖರಾದ ಮೋಹನ್ ಅಂಡಿಂಜೆ, ವಿದ್ಯಾನಂದ ಕುಮಾರ್, ಸುಪ್ರಿತ್ ಜೈನ್, ಅಭಿಜಿತ್ ಜೈನ್, ನಿತೀಶ್ ಗುಂಡೂರಿ, ಸತೋಷ್ ಕುಮಾರ್ ಪಕ್ಕಳ, ಉಮೇಶ ನಡ್ತಿಕಲ್ಲು, ಸೇವಾ ಶರಥಿ ವಿಸ್ವಸ್ತ ಮಂಡಳಿಯ ಶೈಲಜಾ ಭಟ್, ಕುಮುದಾ ಕಾರಂತ್, ನಂದಿತಾ ಎಸ್. ಕಾಮತ್, ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಸಜೇಶ್ ಆರಿಗ ಪೆರ್ಮಾಣುಗುತ್ತು, ಸಂಚಾಲಕ ಸುಧೀರ್ ಕುಮಾರ್, ಸುದತ್ ಜೈನ್, ಅಕ್ಷಯ್, ಪ್ರಮೋದ್ ಕುಮಾರ್, ಪ್ರಭಾಚಂದ್ರ ಜೈನ್, ಶ್ರೇಯಸ್ ಜೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಭಾಷಿಣಿ ಉದಯ ಕುಮಾರ್ ಪ್ರಾರ್ಥಿಸಿ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಸ್ವಾಗತಿಸಿ, ಜತೆ ಕಾರ್ಯದರ್ಶಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.