ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಶ್ರೀ ಶಿಶಿಲೇಶ್ವರ ದೇವಸ್ಥಾನದ ‘ಮತ್ಸ್ಯ ಸೂಚನಾ ಫಲಕ’ ಅನಾವರಣ

 

ಶಿಶಿಲ: ಇಲ್ಲಿಯ ಶಿಶಿಲ ಮತ್ಸ್ಯ ತೀರ್ಥ ಪ್ರಖ್ಯಾತ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ  “ಮತ್ಸ್ಯ ಸೂಚನಾ ಫಲಕ”ವನ್ನು ರಾಜ್ಯ ಮೀನುಗಾರಿಕ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖಾ ಹಾಗೂ ಉಸ್ತುವಾರಿ ಸಚಿವ  ಕೋಟ ಶ್ರೀನಿವಾಸ ಪೂಜಾರಿಯವರು ನ.9 ರಂದು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ತಹಶೀಲ್ದಾರ್ ಮಹೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್,   ಹತ್ಯಡ್ಕ ಸಹಕಾರಿ ಸಂಘದ  ಅಧ್ಯಕ್ಷ ರಾಘವೇಂದ್ರ  ನಾಯ್ಕ್, ಶ್ರೀನಿವಾಸ ಮೂಡೆತ್ತಾಯ,  ದೇವಳದ ಆಡಳಿತ ಅಧಿಕಾರಿ ಚಿದಾನಂದ ಹೂಗಾರ್,   ಮಂಗಳೂರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ  ಪಾರ್ಶ್ವನಾಥ, ಹಿರಿಯ ಸಹಾಯಕ ನಿರ್ದೇಶಕಿ  ಸುಶ್ಮಿತಾ, ಮತ್ತಿತರ ಪ್ರಮುಖರು, ಭಕ್ತಾಧಿಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.