HomePage_Banner_
HomePage_Banner_

ನಿವೃತ್ತ ಶಿಕ್ಷಕ ಕೆ ಗೋಪಾಲಕೃಷ್ಣ ಗೊಲ್ಲರ ಸಂಸ್ಮರಣಾಗ್ರಂಥ ‘ಬೆಳಾಲಿನ ಸದಾಪುಷ್ಪ’ ಸಮರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಶ್ರೀ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಬೆಳಾಲು ಇಲ್ಲಿಯ ನಿವೃತ್ತ ಶಿಕ್ಷಕ ಕೆ ಗೋಪಾಲಕೃಷ್ಣ ಗೊಲ್ಲರವರ ಸಂಸ್ಮರಣೆ ಮತ್ತು ‘ಬೆಳಾಲಿನ ಸದಾಪುಷ್ಪ’ ಸಂಸ್ಮರಣಾ ಗ್ರಂಥ ಸಮರ್ಪಣೆ ನ.8 ರಂದು ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಜರುಗಿತು.
ಗೋಪಾಲಕೃಷ್ಣ ಗೊಲ್ಲರವರ ಶಿಷ್ಯ, ಬೆಂಗಳೂರು ಪೂರ್ಣಪ್ರಜ್ಞಾ ವಿದ್ಯಾ ಪೀಠದ ಪ್ರಾಂಶುಪಾಲ ಡಾ| ಸತ್ಯ ನಾರಾಯಣಾಚಾರ್ಯ ರವರು ಸಂಸ್ಮರಣಾ ಗ್ರಂಥವನ್ನು ಬಿಡುಗಡೆಗೊಳಿಸಿ ವಿನೋದಿನಿ ಗೋಪಾಲಕೃಷ್ಣ ಗೊಲ್ಲರಿಗೆ ಸಮರ್ಪಿಸಿದರು.


ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಜತ್ತನ್ನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡ, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ, ಸಂಸ್ಮರಣಾ ಗ್ರಂಥದ ಸಂಪಾದಕ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಯಕ್ಷಗಾನ ಕಲಾವಿದ ಪಿ. ಲಕ್ಷ್ಮಣ ಗೌಡ, ವಾಣಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಸೋಮೇ ಗೌಡ, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ, ನಿವೃತ್ತ ಶಿಕ್ಷಕಿ ಸುವರ್ಣಲತಾ, ನ್ಯಾಯವಾದಿ ಶ್ರೀನಿವಾಸ ಗೌಡ, ಉಪನ್ಯಾಸಕ ಮೋಹನ ಗೌಡ, ಗೋಪಾಲಕೃಷ್ಣ ಗೊಲ್ಲರವರ ಮಕ್ಕಳು, ಕುಟುಂಬ ವರ್ಗದವರು ಶಿಷ್ಯಂದಿರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.