HomePage_Banner_
HomePage_Banner_

ಕಳೆಂಜ:  ಹೊಳೆ ದಾಟುತ್ತಿದ್ದ ವೇಳೆ ಜಾರಿ ಬಿದ್ದು ಯುವಕ ಮೃತ್ಯು

ಕಳೆಂಜ :  ಇಲ್ಲಿಯ ಕುಡುಪ್ಪಾರು ಬಳಿಯ ಪಂಜಾಲ ಎಂಬಲ್ಲಿ  ಹೊಳೆಯನ್ನು ದಾಟುತ್ತಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಯುವಕ ಮೃತ ಪಟ್ಟ ಘಟನೆ ಇಂದು(ನ.7) ಬೆಳಗ್ಗೆ ನಡೆದಿದೆ.

ಮೊಗ್ರು ಗ್ರಾಮದ ಮುಗೆರಡ್ಕ  ಅಲೆಕ್ಕಿ ನಿವಾಸಿ ಧರ್ಣಪ್ಪ ಗೌಡ ಮತ್ತು ಯಮುನಾ ದಂಪತಿ ಪುತ್ರ ದುರ್ಗೇಶ(17.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.

ದುರ್ಗೆಶ ರವರು  ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ ಸಂಬಂಧಿಕರಾದ ಕಲೇಂಜ ಗ್ರಾಮದ ಕುಡುಪ್ಪಾರು ಮಾರ್ವೆಲ್ ನಾರಾಯಣ ಗೌಡ ರವರ ಮನೆಗೆ ಬಂದಿದ್ದರು.  ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ  ಸಮೀಪದ ಕುಡುಪ್ಪಾರು ಬಳಿ ಇರುವ ಪಂಜಾಲ ಎಂಬಲ್ಲಿ  ಹೊಳೆಯನ್ನು ದಾಟುತ್ತಿರುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.


ಮೃತ ಶರೀರದ ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

 ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.