HomePage_Banner_
HomePage_Banner_

ಕಿಲ್ಲೂರು: ಪಿಗ್ಮಿ ಸಂಗ್ರಾಹಕ ವಿಠಲ ಭಟ್ ನಿಧನ

ಮಿತ್ತಬಾಗಿಲು ಇಲ್ಲಿಯ ‘ಶ್ರೀನಿವಾಸ ಕೃಪಾ’ ನಿವಾಸಿ, ದಿ| ಶ್ರೀನಿವಾಸ ಭಟ್ ರವರ ಪುತ್ರ ಪಿಗ್ಮಿ ಸಂಗ್ರಾಹಕ ವಿಠಲ ಭಟ್ (59.ವ) ರವರು ಅಲ್ಪಕಾಲದ ಅಸೌಖ್ಯದಿಂದ ನ.7 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಂದ ಬಳಲುತ್ತಿದ್ದ ಅವರನ್ನು ಬಂಗಾಡಿ ಖಾಸಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಲಿಸಲಾಗಿತ್ತು. ಚಿಕಿತ್ಸೆಗೆ  ಸ್ಪಂದಿಸದೆ ಅವರು ಇಂದು ಕೊನೆಯುಸಿರೆಳೆದರು.

ಇವರು ಬಂಗಾಡಿ ಸಹಕಾರಿ ವ್ಯವಸಾಯಿಕ   ಸಂಘದಲ್ಲಿ ಸುಧೀರ್ಘ 35 ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.

 ಮೃತರು ಪತ್ನಿ ವೇದಾವತಿ, ಓರ್ವ  ಪುತ್ರ ಕಿರಣ್, ಓರ್ವ ಪುತ್ರಿ ಅಂಕಿತಾ, ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.