HomePage_Banner_
HomePage_Banner_

ಅಕ್ರಮ ಮರದ ದಿಮ್ಮಿ ಸಾಗಾಟ: ಲಾರಿ ಸಮೇತ ಆರೋಪಿ ಸೆರೆ

ಪುಂಜಾಲಕಟ್ಟೆ : ಹಲಸು ಹಾಗೂ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ  ಆರೋಪಿಯನ್ನು ಸೆರೆ ಹಿಡಿದು ಸೊತ್ತು ಸಮೇತ ಲಾರಿಯನ್ನು ವಶಪಡಿಸಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನ.5 ರಂದು ನಡೆದಿದೆ.
ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್ ಎಸ್ ರವರು ಗಸ್ತು ಕರ್ತವ್ಯದಲ್ಲಿರುವ ಸಂದರ್ಭ ಪುಂಜಾಲಕಟ್ಟೆಯಲ್ಲಿ ಲಾರಿ ನಂಬ್ರ ಕೆಎ19ಬಿ 2780 ವಾಹನದಲ್ಲಿ ಸುಮಾರು ರೂ.5 ಲಕ್ಷ ಮೌಲ್ಯದ ಹಲಸು ಹಾಗೂ ವಿವಿಧ ಜಾತಿಯ 35 ದಿಮ್ಮಿ ಮತ್ತು 17 ಕಂಬಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ ಸೊತ್ತು ಸಮೇತ ಲಾರಿಯನ್ನು ವಶಪಡಿಸಿ ಸರಕಾರಕ್ಕೆ ಅಮಾನತು ಪಡಿಸಿಕೊಂಡಿರುತ್ತಾರೆ.
ಆರೋಪಿ ಲಾರಿ ಚಾಲಕ ಮೊಗರ್ನಾಡು ಗ್ರಾಮದ ಏಳಬೆಬೈಲು, ಶೇಡಿಗುರಿ ನಿವಾಸಿ ವಾಮನ ರವರನ್ನು ದಸ್ತಗಿರಿ ಮಾಡಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಲಾರಿ ಮಾಲಕ ಕಿರಣ್ ಕುಮಾರ್ ರವರಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜೇಶ್ ಎಸ್, ರವೀಂದ್ರ ಕೆ, ರಾಜಶೇಖರ್ ಕ್ಯಾತ್ನರ್, ರವೀಂದ್ರ ಅಂಕಲಗಿ ಹಾಗೂ ಅರಣ್ಯ ರಕ್ಷಕರಾದ ಪರಮೇಶ್ವರ ಪಟಗಾರ್, ರಾಘವೇಂದ್ರ ಪ್ರಸಾದ್, ಪರಮೇಶ್ವರ ಎ ಮತ್ತು ಜೀಪು ಚಾಲಕ ಕುಶಲ ಗೌಡ ಇವರುಗಳು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.