ಶಿಶಿಲ: ಖ್ಯಾತ ಲೇಖಕಿ ಡಾ| ವೃಂದಾ ಬೇಡೇಕರ್ ರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರೋಗ್ಯ ವಿಜ್ಞಾನಗಳ ಶ್ರೇಷ್ಠ ವೈದ್ಯ ಲೇಖಕರಲ್ಲಿ ಓರ್ವರಾಗಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ಡಾ| ವೃಂದಾ ಬೇಡೇಕರ್ ರವರನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಇದರ ವತಿಯಿಂದ ನ. 5 ರಂದು ಬೆಂಗಳೂರಿನ ಧನ್ವಂತರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ   ಡಾ| ಕೆ. ಸುಧಾಕರ್ ಡಾ| ವೃಂದಾ ಬೇಡೇಕರ್ ರವರನ್ನು  ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ವಿವಿಯ ಕುಲಪತಿ ಡಾ| ಎಸ್. ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.

 ಶಿಶಿಲ ಗ್ರಾಮದ  ಯೋಗೇಶ್ ಬೇಡೇಕರ್ ರವರ ಪತ್ನಿಯಾಗಿರುವ ಡಾ| ವೃಂದಾ ರವರು ಪ್ರಸ್ತುತ ಮೂಡುಬಿದರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಚಿಕಿತ್ಸಾ ವಿಭಾಗದ ಪ್ರೋಫೆಸರ್ ಹಾಗೂ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವೇ ಜೀವನ ಇವರ ಪ್ರಮುಖ ಕೃತಿಯಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.