HomePage_Banner_
HomePage_Banner_

‘ಶ್ರಮಿಕ’ ಕಛೇರಿಗೆ ರಾಜ್ಯ ಬಿಜೆಪಿ ನಾಯಕರ ಭೇಟಿ: ಶಾಸಕ ಪೂಂಜ ಕಾರ್ಯವೈಖರಿಗೆ ಪ್ರಶಂಸೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ  ಶ್ರಮಿಕ ಕಚೇರಿಗೆ  ಭಾರತೀಯ ಜನತಾ  ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿ ಕುಮಾರ್, ರಾಜ್ಯ ಉಪಾಧ್ಯಕ್ಷ ರಾಜೇಶ್ ಮೈಸೂರು, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಇವರುಗಳು ನ.6 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ  ಪೂಂಜ ರವರು ಎಲ್ಲರನ್ನು ಸ್ವಾಗತಿಸಿ, ಗೌರವಿಸಿದರು.

 ಈ ಸಂದರ್ಭದಲ್ಲಿ ಬಿಜಪಿ ಮಂಡಲ ಉಪಾಧ್ಯಕ್ಷ ರಾದ ಸೀತಾರಾಮ ಬಿ.ಎಸ್, ಕೊರಗಪ್ಪ ಗೌಡ, ಎಸ್.ಟಿ‌ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನ ಕೇಶವ ಮುಂಡಾಜೆ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಯತೀಶ್ ಶೆಟ್ಟಿ, ತಾಪಂ ಸದಸ್ಯ ಜೋಯೆಲ್ ಮೆಂಡೋನ್ಸಾ, ಪ್ರಮುಖರಾದ ನರಸಿಂಹ ಶೆಟ್ಟಿ, ನಂದ ಕುಮಾರ್, ರಾಮಪ್ರಸಾದ್ ಮರೋಡಿ, ರಾಜೇಶ್ ಪೆಂರ್ಬುಡ, ಜಯಾನಂದ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಹರೀಶ್ ಪೂಂಜಾ ಅವರ ಕಾರ್ಯವೈಖರಿಗೆ ರಾಜ್ಯ ನಾಯಕರು ಇದೇ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.