HomePage_Banner_
HomePage_Banner_

ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ 2019-20 ನೇ ಸಾಮಾನ್ಯ ಸಭೆ ನ.6 ರಂದು ಉಜಿರೆ ಅರಿಪ್ಪಾಡಿ ಮಠದ ಸಭಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಆರ್ಥಿಕ ವರ್ಷದಲ್ಲಿ ನಿವ್ವಳ ರೂ.1704308/ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 65 ಬೋನಸ್ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುವ ಸದಸ್ಯರನ್ನು ಗೌರವಿಸಲಾಯಿತು ಹಾಗು ಸದಸ್ಯ ರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇ.ಸುಂದರ ಗೌಡ, ಪಿಎಲ್ ಡಿ ಬ್ಯಾಂಕ್ ನ ಮಾಜಿ ನಿರ್ದೇಶಕ ತುಂಗಪ್ಪ ಗೌಡ, ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ಆಡಳಿತ ಮಂಡಳಿಯ ಸದಸ್ಯರುಗಳಾದ ಬಾಲಸುಬ್ರಹ್ಮಣ್ಯ ಭಟ್, ಗೋಪಾಲಕೃಷ್ಣ ಬಿಎಸ್, ನಾರಾಯಣ ಬಂಗೇರ, ಕೇಶವ ಗೌಡ, ಅನಿಲ್ ಡಿಸೋಜ, ಸಂತೋಷ ಎಂ, ಜಯಶ್ರೀ ಪ್ರಕಾಶ್, ನಾಗವೇಣಿ, ಶಶಿಕಲಾ, ಬೇಬಿ, ವಾರಿಜ, ಮತ್ತು ಸದಸ್ಯರು ಹಾಜರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ   ಸೌಮ್ಯ ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.