HomePage_Banner_
HomePage_Banner_

ವೇಣೂರು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ರೂ. 5 ಲಕ್ಷ ಸಹಾಯಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇತಿಹಾಸ ಪ್ರಸಿದ್ಧ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾದ ರೂ. 5 ಲಕ್ಷ ಮೊತ್ತದ ಸಹಾಯಧನದ ಚೆಕ್ಕನ್ನು ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ರವರು ದೇವಸ್ಥಾನದ ಜಿರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.
ಈ ವೇಳೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಡಾ ಡಿ ವೀರೇಂದ್ರ ಹೆಗ್ಗಡೆಯವರ  ಮಾರ್ಗದರ್ಶನದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವೇಗವಾಗಿ ಸಾಗುತ್ತಾ ಬಂದಿದೆ. ಶ್ರೀ ಕ್ಷೇತ್ರದಿಂದ ಈವರೆಗೆ ರೂ. 15 ಲಕ್ಷ ಮೊತ್ತದ ಸಹಾಯಧನ ಲಭಿಸಿದೆ ಎಂದರು.
ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಯಶವಂತ್ ಎಸ್., ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರುಗಳಾದ ಪಿ. ಧರಣೇಂದ್ರ ಕುಮಾರ್, ಪುರುಷೊತ್ತಮ ರಾವ್, ಸೋಮಯ್ಯ ಮೂಲ್ಯ, ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಪ್ರಮುಖರಾದ ಸತೀಶ್ ಹೆಗ್ಡೆ, ಹರೀಶ್ ಕುಲಾಲ್, ಜಯಶಂಕರ ಹೆಗ್ಡೆ, ನಾರಾಯಣ ಕುಲಾಲ್, ದೇವಳದ ಸಿಬ್ಬಂದಿ ಕೊರಗಪ್ಪ ಎಂ, ವಲಯದ ಸೇವಾಪ್ರತಿನಿಧಿಗಳು, ಮತ್ತಿತರರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಯೋಗಿಶ್ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.