HomePage_Banner_
HomePage_Banner_

ಕುಪ್ಪೆಟ್ಟಿ:ನಿವೃತ್ತ ಶಿಕ್ಷಕ ಧರ್ಣಪ್ಪ ನಾಯ್ಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುಪ್ಪೆಟ್ಟಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರಿಂಜ ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯ  ಧರ್ಣಪ್ಪ ನಾಯ್ಕರವರಿಗೆ ಕುಪ್ಪೆಟ್ಟಿ ವಲಯದ ಶಿಕ್ಷಕರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು‌.
ಸನ್ಮಾನ ನೆರವೇರಿಸಿದ ಬೇಂಗಿಲ ಶಾಲಾ ಮುಖ್ಯೋಪಾಧ್ಯಾಯ ತಿಪ್ಪಣ್ಣ ಮಾತನಾಡಿ, ‘ಧರ್ಣಪ್ಪ ನಾಯ್ಕರ ಸರಳತೆ, ಕರ್ತವ್ಯ ನಿಷ್ಠೆ ನಮಗೆಲ್ಲ ಮಾದರಿಯಾಗಿದೆ. ನಾವು ಸಮಾಜಕ್ಕೆ ಮಾಡುವ ಉತ್ತಮ ಕೆಲಸಗಳು ಸದಾ ಕಾಲ ಆ ವ್ಯಕ್ತಿಯ ನೆನಪನ್ನು ಶಾಶ್ವತವಾಗಿ ಇರಿಸುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಣಪ್ಪ ನಾಯ್ಕರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕರಾಯ ಸಿ.ಆರ್.ಪಿ. ಮಹಮ್ಮದ್ ಶರೀಫ್ ಕೆ.ಪಿ., ತಾಲೂಕು ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿ ಬಿ.ಎಸ್.ಬಿರಾದಾರ್, ತಾಲೂಕು ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾಚಾರ್ , ಮೈರೋಳ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ನಿವೃತ್ತರ ಸೇವೆಯನ್ನು ಸ್ಮರಿಸಿದರು.

ಕುಪ್ಪೆಟ್ಟಿ ಶಾಲಾ ಮುಖ್ಯೋಪಾಧ್ಯಾಯ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ಲಸ್ಟರ್ ಸಿ.ಆರ್.ಪಿ.ಸಂಧ್ಯಾ ಬಿ. ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಗಂಗಾಧರ ಸೇರಿದಂತೆ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.