HomePage_Banner_
HomePage_Banner_

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತಿ ಹೊಂದಿದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಅವರಿಗೆ ಬೀಳ್ಕೊಡುಗೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 39 ವರ್ಷಗಳಿಂದ ಸೇವೆಯನ್ನು ಸಲ್ಲಿಸಿ ಸೇವಾ ವಯೋ ನಿವೃತ್ತಿ ಹೊಂದಿದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿಯವರ ಬೀಳ್ಕೊಡುಗೆ ಸಮಾರಂಭ  ಧರ್ಮಸ್ಥಳ ಯೋಜನೆಯ ಕೇಂದ್ರ ಕಛೇರಿಯಲ್ಲಿ ಜರಗಿತು.
ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಸಮಾರಂಭದಲ್ಲಿ ಭಾಗವಹಿಸಿ ನಿವೃತ್ತಿ ಹೊಂದಿದ ಎ. ಶ್ರೀಹರಿ ಅವರನ್ನು ಸನ್ಮಾನಿಸಿದರು. ಕಾರ್ಯನಿರ್ವಾಹಣಾಧಿಕಾರಿಯವರಾದ ಡಾ| ಎಲ್.ಎಚ್.ಮಂಜುನಾಥ್, ಹಣಕಾಸು ಪ್ರಾದೇಶಿಕ ನಿರ್ದೇಶಕರಾದ ಶಾಂತರಾಮ ಆರ್ ಪೈ ಮತ್ತು ಸ್ವ-ಸಹಾಯ ಸಂಘಗಳ ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮ, ಯೋಜನೆಯ ಮುಖ್ಯ ನಿರ್ವಾಹಣಾಧಿಕಾರಿ ಎಸ್.ಎಸ್. ಅನಿಲ್ ಕುಮಾರ್, ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಎ.ಶ್ರೀಹರಿಯವರ ಧರ್ಮಪತ್ನಿ ಶ್ಯಾಮಲ, ಕೇಂದ್ರ ಕಛೇರಿಯ ನಿರ್ದೇಶಕರು, ಯೋಜನಾಧಿಕಾರಿಯವರು, ಪ್ರಬಂಧಕರು, ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್ ಸ್ವಾಗತಿಸಿ, ಶುದ್ಧಗಂಗಾ/ಕೆರೆ ವಿಭಾಗದ ನಿರ್ದೇಶಕರಾದ ಲಕ್ಷ್ಮಣ್.ಎಂ ಧನ್ಯವಾದ ವಿತ್ತರು. ಪ್ರಗತಿ ರಕ್ಷಾ ಕವಚದ ಯೋಜನಾಧಿಕಾರಿಯಾದ ಬಾಲಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು. ಮುಂದಿನ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಅಧಿಕಾರ ವಹಿಸಿಕೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.