HomePage_Banner_
HomePage_Banner_

ವಾಹನ ಗೃಹ ಹಾಗೂ ಗೃಹೋಪಯೋಗಿ ವಸ್ತುಗಳ ಮಹಾ ಮಾರಾಟ ಮೇಳ

 

 

ಬೆಳ್ತಂಗಡಿ: ಇಲ್ಲಿಯ ಪ್ರಜ್ವಲ್ ಕಾಂಪ್ಲೆಕ್ಸ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಆಟೋ ಮ್ಯಾಟ್ರಿಕ್ಸ್, ಹುಂಡಾಯಿ, ಟಿ.ವಿ.ಎಸ್., ಹೀರೋ ಮೋಟಾರ್‍ಸ್‌ನ ಜಂಟಿ ಆಶ್ರಯದಲ್ಲಿ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳ ದೀಪಾವಳಿ ಹಬ್ಬದ ಮೇಳವು ನ.೩ರಂದು ಜರುಗಿತು.
ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕ ಪ್ರಮೋದ್ ಆರ್. ನಾಯಕ್ ಉದ್ಘಾಟಿಸಿ ವಿಶ್ವದಾದ್ಯಂತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳಿಂದ ಕಳೆದ ಕೆಲವು ದಿನಗಳಿಂದ ಆರ್ಥಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ಸಾಲ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿರುವುದು ಶ್ಲಾಘನೀಯವೆಂದರು. ದಕ್ಷಿಣ್ ಮೋಟಾರ್‍ಸ್‌ನ ಮಾಲಕ ಸತೀಶ್ ಶೆಟ್ಟಿ, ಸುಪ್ತಾ ಟ್ರೇಡಿಂಗ್‌ನ ಮಾಲಕ ಸುಧಾಕರ್ ಶೆಟ್ಟಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶಾಖಾಧಿಕಾರಿ ಸಂತೋಷ್ ಮೂಲ್ಯ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ಶೆಟ್ಟಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಬ್ಯಾಂಕಿನ ಸಿಬ್ಬಂದಿಗಳಾದ ಹರ್ಷಿತಾ, ಸ್ವಾತಿ, ರವೀಂದ್ರ, ನವೀನ್, ಮುಂತಾದವರು ಉಪಸ್ಥಿತರಿದ್ದರು. ಅಟೋಮ್ಯಾಟ್ರಿಕ್ಸ್, ಹುಂಡಾಯಿ, ಟಿ.ವಿ.ಎಸ್., ಹಾಗೂ ಹೀರೋ ಮೋಟಾರ್‍ಸ್‌ನ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.