HomePage_Banner_
HomePage_Banner_

ಗುರುವಾಯನಕೆರೆ: ಪಂಚಮುಖಿ ಇಂಜಿನಿಯರಿಂಗ್ ವರ್ಕ್ಸ್ ಶುಭಾರಂಭ

ಗುರುವಾಯನಕೆರೆ: ಇಲ್ಲಿನ ದಿವ್ಯಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಪಂಚಮುಖಿ ಇಂಜಿನಿಯರಿಂಗ್ ವರ್ಕ್ಸ್ ಇದರ ಶುಭಾರಂಭ ನಡೆಯಿತು. ಮಾಲಕರ ಮಾತಾಪಿತರಾದ ಗೋಪಾಲ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ದೀಪ ಬೆಳಗಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಗುತ್ತಿಗೆದಾರ ಪ್ರಶಾಂತ್ ಎಂ, ನ.ಪಂ ಸದಸ್ಯ ಜಯಾನಂದ ಗೌಡ, ಸಿವಿಲ್ ಕಂಟ್ರಾಕ್ಟರ್ ರಾಮಣ್ಣ ಕುಲಾಲ್, ಕಾಂಪ್ಲೆಕ್ಸ್ ಮಾಲಕ ಕೃಷ್ಣಪ್ಪ ಕುಲಾಲ್ ಮಾಕೆರೆಕೆರೆ, ಉದ್ಯಮಿ ಸಂತೋಷ್ ವೈಭವ್ ಜಿ.ಕರೆ, ಹಿರಿಯರಾದ ರವಿ ಕೋಟ್ಯಾನ್ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕ ನಿತೇಶ್ ಓಡಿಲ್ನಾಲ ಸ್ವಾಗತಿಸಿ ಸತ್ಕರಿಸಿದರು.
ಸಂಸ್ಥೆಯಲ್ಲಿ ಗ್ರೀಲ್ಸ್,ಗೇಟ್,ಸ್ಟೀಲ್ ಫ್ರಾಬ್ರಿಕೇಶನ್,ರೋಲಿಂಗ್ ಶಟರ್,ಟ್ರಸ್ ರೂಪಿಂಗ್,ವಾಹನಗಳ ಬಾಡಿ ಕೆಲಸಗಳನ್ನು ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.