ಬಂಟ್ವಾಳ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ: ಅ 20 ರಂದು ಬಂಟ್ವಾಳದ ಭಂಡಾರಿ ಬೆಟ್ಟುವಿನ, ವಸ್ತಿ ಅಪಾರ್ಟ್ ಮೆಂಟ್ ನ ಸುರೇಂದ್ರ ಭಂಡಾರಿ ಗೆ ಸಂಬಂಧಿಸಿದ ಪ್ಲಾಟ್ ನಲ್ಲಿ ಸುರೇಂದ್ರ ಭಂಡಾರಿ ಯವರನ್ನು ದುಷ್ಕರ್ಮಿಗಳು, ಕೊಚ್ಚಿ ಕೊಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಸೇರಿದಂತೆ 9 ಆರೋಪಿಗಳ ಬಂಧನವಾಗಿ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 


ಮುಂದುವರೆದ ತನಿಖೆಯಲ್ಲಿ ಕೊಲೆ ಮಾಡಿದ ಪ್ರಮುಖ ಆರೋಪಿಗಳಾದ ಸತೀಶ್ ಮತ್ತು ಗಿರೀಶ್ ನಿಗೆ ತಲೆಮರೆಸಿಕೊಳ್ಳಲು ಆಶ್ರಯ,ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದ ಹಾಗೂ ಇದಕ್ಕಾಗಿ ರೂ.2,50,000 ಹಣ ಪಡೆದಿದ್ದ ಬೆಳ್ತಂಗಡಿ ತಾಲ್ಲೂಕಿನ,ಲಾಯಿಲ ಗ್ರಾಮದ ಪ್ರತೀಕ್(27) ಮತ್ತು ಇದೇ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಹಾಗೂ ಪ್ರಮುಖ ಆರೋಪಿ ಶರಣ್ ಆಕಾಶಭವನ ನ ನಿರ್ದೇಶನದಂತೆ ಸುಫಾರಿ ಹಣವನ್ನುಆರೋಪಿ ಪ್ರದೀಪ್ @ಪಪ್ಪು ವಿನಿಂದ ಪಡೆದು ಹತ್ಯೆಗೆ ಸಹಕರಿಸಿದ್ದ ಮಂಗಳೂರು ತಾಲ್ಲೂಕಿನ ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್@ಸಚ್ಚು(28) ಎಂಬುವರನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

*.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.