ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ಅಸ್ತಿತ್ವಕ್ಕೆ

ಬೆಳ್ತಂಗಡಿ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ದ.ಕ. ಜಿಲ್ಲಾ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕು ಕೆ.ಜೆ.ಯು. ಘಟಕ ರಚನೆಗಾಗಿ ಪೂರ್ವಭಾವಿ ಸಭೆ ನ.3ರಂದು ಬೆಳ್ತಂಗಡಿಯ ಮೀಡಿಯಾ ಕ್ಲಬ್ ಕಚೇರಿಯಲ್ಲಿ ನಡೆದು ಕೆ.ಜೆ.ಯು. ತಾಲೂಕು ಘಟಕ ರಚನೆಗೆ ನಿರ್ಧರಿಸಲಾಯಿತು. ಈಗಾಗಲೇ ಬೆಳ್ತಂಗಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೀಡಿಯಾ ಕ್ಲಬ್ ಪದಾಧಿಕಾರಿಗಳನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕದ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.

ಇನ್ನಷ್ಟು ಜನರನ್ನು ಸೇರಿಸಿಕೊಂಡು ಪ್ರಮುಖ ಪದಾಧಿಕಾರಿಗಳನ್ನಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಲು ನಿರ್ಧರಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷರಾಗಿ ಸತೀಶ್ ಪೆರ್ಲೆ (ವಿ.4 ನ್ಯೂಸ್), ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ (ಪ್ರಜಾಪ್ರಕಾಶ), ಖಜಾಂಚಿಯಾಗಿ ಶರತ್ ಗೌಡ (ನಮನ ಟಿ.ವಿ.) ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ (ನಮ್ಮ ಟಿ.ವಿ), ಜತೆಕಾರ್ಯದರ್ಶಿಯಾಗಿ ಚೇತನಾ (ನಮ್ಮೂರ ಸುದ್ದಿ) ಆಯ್ಕೆಯಾದರು. ಇತರರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು.


ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೆ.ಜೆ.ಯು. ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡ್ ಜರ್ನಲಿಸ್ಟ್ ಯೂನಿಯನ್ ನಿಯಮಾವಳಿಗಳನ್ನು ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಕುಂದರ್, ಜಿಲ್ಲಾ ಖಜಾಂಚಿ ಜ್ಯೋತಿಪ್ರಕಾಶ್ ಪುಣಚ ಚರ್ಚೆಯಲ್ಲಿ ಭಾಗವಹಿಸಿದ್ದರು.

ಸತೀಶ್ ಪೆರ್ಲೆ ಸ್ವಾಗತಿಸಿ, ಶರತ್ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.