ಕೊಕ್ರಾಡಿ: ಮಗುವಿನೊಂದಿಗೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕೊಕ್ರಾಡಿ: ಇಲ್ಲಿಯ ಹೆಡ್ಲಬೆಟ್ಟು ಮನೆಯಲ್ಲಿ ವಾಸ್ತವ್ಯವಿದ್ದ ಕೃಷಿಕ ದಂಪತಿ ತಮ್ಮ ಮಗುವಿನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.2 ರಂದು ತಡರಾತ್ರಿ ನಡೆದಿದೆ. ಕೊಕ್ರಾಡಿ ಗ್ರಾಮದ ಅತ್ರಿಜಾಲು ನಿವಾಸಿ ಚೇತನ್ ಕುಮಾರ್(37.ವ) ಅವರ ಪತ್ನಿ ಆಶಾಲತಾ(30.ವ) ಹಾಗೂ 5 ವರ್ಷ ಪ್ರಾಯದ ಮಗು ಕಿಶಾ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಿಂದ ಈ ಮೂವರ ಸ್ಥಿತಿಯೂ ಚಿಂತಾಜನಕವಾಗಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೇತನ್ ಕುಮಾರ್ ರವರ ಮನೆ

ಇವರು ಪ್ರಗತಿಪರ ಕೃಷಿಕರಾಗಿದ್ದು, ಆರ್ಥಿಕವಾಗಿ ಸಧೃಢರಾಗಿದ್ದರು. ಯಾವುದೋ ಕೌಟುಂಬಿಕ ಕಲಹದಿಂದ ಈ ಕೃತ್ಯವೆಸಗಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಆತ್ಮಹತ್ಯೆಗೆ ಯತ್ನ: ತಂದೆ ಮತ್ತು ಮಗು ಸಾವು; ತಾಯಿ ಸ್ಥಿತಿ ಗಂಭೀರ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.