HomePage_Banner_
HomePage_Banner_

ಶಿರ್ಲಾಲು: ಸಿ.ಇ.ಒ ಆಗಿ ಅಧಿಕಾರ ಸ್ವೀಕರಿಸಿದ ಅಮ್ಮಾಜಿ ಪೂಜಾರಿಯವರಿಗೆ ಊರವರಿಂದ ಅಭಿನಂದನೆ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲುವಿನಲ್ಲಿ ಕಳೆದ 30 ವರ್ಷಗಳಿಂದ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ವೃತ್ತಿಯಲ್ಲಿ ಪದನ್ನೋತಿಗೊಂಡು ಇದೀಗ ಸಂಸ್ಥೆಯ ಮುಖ್ಯಕಾರ್ಯನಿರ್ವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಮ್ಮಾಜಿ ಪೂಜಾರಿಯವರನ್ನು ಊರವರು ಬ್ಯಾಂಕಿಗೆ ತೆರಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ , ಶಿರ್ಲಾಲು ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ, ಮಾಜಿ ಉಪಾಧ್ಯಕ್ಷ ಸುನೀಲ್ ಜೈನ್, ಶಿರ್ಲಾಲು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ , ಪ್ರಮುಖರಾದ ರಮಾನಂದ ಗುಡ್ಡಾಜೆ,ಎಂಪಿ ಶೇಖರ್,ಹರೀಶ್ ಕಲ್ಲಾಜೆ, ಬಾಲಕೃಷ್ಣ ಬಂಗೇರ,ಪ್ರತಾಪ್ ಕಲ್ಲಾಜೆ,ರಮೇಶ್ ಪೂಜಾರಿ ಮಜಲುಪಲ್ಕೆ,ಜಯರಾಜ್ ಜೈನ್,ಚಿದಾನಂದ ಪೂಜಾರಿ ಇಂಚರ,ಗೋಪಾಲ ಪೂಜಾರಿ ಪಾದೆ,ಯಶೋಧರ ಧಾಕ್ಷಯಿನಿ ನಿವಾಸ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 37 ವರ್ಷಗಳಿಂದ ಪಿ.ಹೆಚ್ ನಿತ್ಯಾನಂದ ಶೆಟ್ಟಿಯವರು ಮುಖ್ಯಕಾರ್ಯನಿರ್ವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಅ‌31 ರಂದು ಅವರು ವೃತ್ತಿಯಿಂದ ನಿವೃತ್ತರಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.