ನ.4: ಕಾಳಜಿ ರಿಲೀಫ್ ಫಂಡ್ ರೂ.2.73 ಕೋಟಿ ಹಣ 299 ಮನೆಗಳಿಗೆ ವಿತರಣೆ

ನ.4: ಕಾಳಜಿ ರಿಲೀಫ್ ಫಂಡ್‍ನ ರೂ.2.73 ಕೋಟಿ  ಹಣವನ್ನು 299 ಮನೆಗಳ ಫಲಾನುಭವಿಗಳಿಗೆ ವಿತರಣೆ


ಬೆಳ್ತಂಗಡಿ: ವಿವಿಧ ದಾನಿಗಳ ಮೂಲಕ ಸಂಗ್ರಹವಾದ ಬೆಳ್ತಂಗಡಿ ಕಾಳಜಿ ರಿಲೀಪ್ ಫಂಡ್
ನಲ್ಲಿರುವ ಒಟ್ಟು ರೂ. 2,73,96,624ಗಳನ್ನು ಕಳೆದ ಬಾರಿ ಮಳೆ ಹಾನಿಗೆ ಒಳಗಾಗಿರುವ 299 ಮನೆಗಳ ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ವಿತರಣಾ ಕಾರ್ಯಕ್ರಮವು ನ.4ರಂದು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಎಸ್.ಡಿ.ಎಂ ಸಭಾ ಭವನದಲ್ಲಿ ನಡೆಯಲಿದೆ ಎಂದು ಕಾಳಜಿ ರಿಲೀಫ್ ಫಂಡ್‍ನ ಕಾರ್ಯದರ್ಶಿ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಹೇಳಿದರು.
ಅವರು ನ.2ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಭಾರಿ ಮಳೆಯಿಂದಾಗಿ ತಾಲೂಕು ಆಡಳಿತ ಗುರುತಿಸಿದಂತೆ ಒಟ್ಟು 210 ಮನೆಗಳು ಸಂಪೂರ್ಣ ಹಾನಿ, 58 ಮನೆಗಳು ಭಾಗಶಃ ಹಾನಿ, ಹಾಗೂ 31 ಮನೆಗಳು ಅಲ್ಪಸಲ್ವ ಹಾನಿಗೆ ಒಳಗಾಗಿರುವುದಾಗಿ ಸರಕಾರಕ್ಕೆ ವರದಿ ನೀಡಿದೆ. ಇದರ ಆಧಾರದಲ್ಲಿ ಕಾಳಜಿ ರಿಲೀಫ್ ಫಂಡನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಕಾಳಜಿ ರಿಲೀಫ್ ಫಂಡ್‍ನಲ್ಲಿ ಈ ದಿನದವರೆಗೆ ಒಟ್ಟು ರೂ. 2,66,10,335 ಸಂಗ್ರಹವಾಗಿದೆ. ಇದಕ್ಕೆ ರೂ.7,87,979 ಬಡ್ಡಿ ಬಂದಿದ್ದು, ಒಟ್ಟು ರೂ. 2,73,98,315 ಇದೆ. ಇದರಲ್ಲಿ ಬ್ಯಾಂಕ್ 1,691ನ್ನು ಬ್ಯಾಂಕ್ ಚಾರ್ಚ್ ತೆಗೆದಿದ್ದು, ಈಗ ನಿವ್ವಳ ರೂ. 2,73,96,624 ಕಾಳಜಿ ಫಂಡ್‍ನಲ್ಲಿ ಇದೆ. ಇದನ್ನು ಹಂಚುವ ಬಗ್ಗೆ ಕಾಳಜಿ ರಿಲೀಫ್ ಫಂಡ್‍ನ ಸಮಿತಿಯ ಸಭೆಯನ್ನು ನಡೆಸಿ ಚರ್ಚಿಸಲಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಇದರಂತೆ 210 ಎ ಕೇಟಗರಿ ಮನೆಗಳಿಗೆ ತಲಾ ರೂ.1 ಲಕ್ಷ, 58 ಬಿ ಕೇಟಗರಿ ಮನೆಗಳಿಗೆ ತಲಾ ರೂ. 80 ಸಾವಿರದಂತೆ ಹಾಗೂ 31 ಸಿ ಗೇಟಗರಿ ಮನೆಗಳಿಗೆ ತಲಾ ರೂ.56.500ರಂತೆ ವಿತರಿಸಲಾಗುವುದು. ಮತ್ತು ರೂ.5 ಸಾವಿರ ಉಳಿಕೆಯಾಗುತ್ತಿದ್ದು, ಅದನ್ನು ಕಾರ್ಯಕ್ರಮದ ದಿನ ಲಕ್ಕೀ ಡ್ರಾ ಮಾಡಿ ನೀಡಲಾಗುವುದು. ಕೊರೊನಾದ ಹಿನ್ನಲೆಯಲ್ಲಿ ಸರಕಾರದ ನಿಯಮವನ್ನು ಪಾಲಿಸಿ ಎಲ್ಲಾ ಫಲಾನುಭವಿಗಳಿಗೆ ಚೆಕ್ ಮೂಲಕ ವಿತರಣೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವ ಸಿ.ಟಿ ರವಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‍ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಎಂಎಲ್‍ಸಿ ಪ್ರತಾಪಸಿಂಹ ನಾಯಕ್, ಎಸ್‍ಕೆಡಿಆರ್‍ಡಿಪಿ ಸ.ಕಾ. ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ನಂದಕುಮಾರ್ ಸದಸ್ಯರಾದ ಮೋಹನ್‍ಕುಮಾರ್ ಲಕ್ಷ್ಮೀಗ್ರೂಪ್, ರಾಜೇಶ್ ಪೈ ಉಜಿರೆ, ಎಸ್‍ಕೆಡಿಆರ್‍ಡಿಪಿಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.