ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಉಮಾನಾಥ್ ಶೆಣೈ ಯವರಿಗೆ ಶಾಸಕ ಪೂಂಜರಿಂದ ಅಭಿನಂದನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್‌ಡಿಎಂ ನ ನಿವೃತ್ತ ಪ್ರಾಧ್ಯಾಪಕ ಡಾ. ಉಮಾನಾಥ್ ಶೆಣೈ ಯವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಅಭಿನಂದನೆ ಸಲ್ಲಿಸಿದರು.

ಡಾ. ಉಮಾನಾಥ್ ಶೆಣೈ ಯವರಿಗೆ  ಇತಿಹಾಸದ ಅಧ್ಯಯನದಲ್ಲಿ  ಪಡೆದಿರುವ ಪಾಂಡಿತ್ಯಕ್ಕೆ ಹಾಗೂ ಇತಿಹಾಸದ ಕುರಿತಾಗಿ ಮಾಡಿದ ಹೊಸ ಸಂಶೋಧನೆಗಳಿಗೆ ಈ ಪ್ರಶಸ್ತಿಯು ಲಭಿಸಿದ್ದು,  ಕಳೆದ 3 ದಶಕಗಳ ಕಾಲ ಎಸ್ ಡಿ ಎಂ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಇವರು ಇತಿಹಾಸದ ಕುರಿತು 110 ಪ್ರಾಚೀನ ಶಿಲಾಶಾಸನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ. ಇತಹಾಸದ ಕುರಿತ 21 ಪುಸ್ತಕಗಳನ್ನು ಬರೆದಿರುವ ಇವರು 30 ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ. ಉಮಾನಾಥ್ ಶೆಣೈ ಯವರ ಪತ್ನಿ ವಿಜಯ ಕುಮಾರಿ ಶೆಣೈ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.