HomePage_Banner_
HomePage_Banner_

ಉಜಿರೆ ಯುವವಾಹಿನಿ ಸಂಚಾಲನ ಸಮಿತಿಯಿಂದ ಗುರುಪೂಜೆ ಹಾಗೂ ಸತ್ಯನಾರಾಯಣ ಪೂಜೆ

 

ಉಜಿರೆ: ಯುವವಾಹಿನಿ ಸಂಚಾಲನ ಸಮಿತಿ ಉಜಿರೆ ಇದರ ಆಶ್ರಯದಲ್ಲಿ ಗುರುಪೂಜೆ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ನ.1 ರಂದು ಉಜಿರೆಯ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರುಗಿತು.


ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯಲ್ಲಿ ತ್ಯಾಗ ಮನೋಭಾವ ಇದ್ದರೆ ಮಾತ್ರ ಆ ಸಂಘಟನೆ ಯಶಸ್ವಿಯಾಗಲು ಸಾಧ್ಯ. ನಾವು ನಮ್ಮ ಯುವ ಜನರಿಗೆ ಧರ್ಮ ಶಿಕ್ಷಣ, ಸರ್ವಾಂಗೀಣ ಶಿಕ್ಷಣವನ್ನು ನೀಡಿ ಬೆಳೆಸಬೇಕು. ಜಂಗಲ್ ರಾಜ್ಯವಾಗಿದ್ದ ಕೇರಳವನ್ನು ದೇವರನಾಡಾಗಿ ಪರಿವರ್ತಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು. ನಾವೆಲ್ಲ್ಲಾ ಅವರ ತತ್ವಾದರ್ಶಗಳನ್ನು ಪಾಲಿಸಿ ಸಧೃಡ ಸಮಾಜವನ್ನು ಕಟ್ಟಬೇಕು ಎಂದು ಆಶೀರ್ವಚನ ನೀಡಿದರು.


ಮುಖ್ಯ ಅತಿಥಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ, ಸಂಘಟನೆಗಳು ಸಮಾಜವನ್ನು ಒಟ್ಟು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಯುವವಾಹಿನಿ ಸಂಘಟನೆಯು ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ, ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದ ಯುವವಾಹಿನಿ ಉಜಿರೆ ಸಂಚಾಲನ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ.ಪ್ರಸಾದ್ ಮಾತನಾಡಿ ಸಂಘಟನೆಗಳಲ್ಲಿ ನಿರಂತರತೆ ಇರಬೇಕು, ಹೊಸ ಹೊಸ ನಾಯಕರನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಆಗ ಮಾತ್ರ ಸಮಾಜ ಹಾಗೂ ಆ ಸಂಘಟನೆ ಪರಿಪೂರ್ಣವಾಗಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಾರಾಯಣ ಪೂಜಾರಿ, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸುಜಾತ ಅಣ್ಣಿ ಪೂಜಾರಿ, ರವಿ ಕುಮಾರ್ ಬರೆಮೇಲು ಮಾತನಾಡಿದರು.
ಸಂಚಾಲನ ಸಮಿತಿಯ ಅಧ್ಯಕ್ಷ ಕಿಶೋರ್ ಪೆರ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಎಸ್ ಕೆ ಮೆಮೋರಿಯಲ್ ಹಾಲ್ ನ ಮಾಲಕರಾದ ಸೂರ್ಯನಾರಾಯಣ, ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ, ಪ್ರಸಾದ್ ಬಿ.ಎಸ್, ನೀಲಯ್ಯ ಪೂಜಾರಿ, ತುಂಗಪ್ಪ ಕೋಟ್ಯಾನ್, ಮನೋಜ್ ಕುಂಜರ್ಪ ಉಪಸ್ಥಿತರಿದ್ದರು.
ಕು| ನಿಶಾ ಪ್ರಾರ್ಥಿಸಿ, ಉಮಾನಾಥ ಕೋಟ್ಯಾನ್ ಸ್ವಾಗತಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿ, ಕಿಶೋರ್ ಪೆರ್ಲ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.