HomePage_Banner_
HomePage_Banner_

ಕೊಕ್ಕಡ: ಕಟ್ಟಡ ಕಾರ್ಮಿಕರಿಗೆ ಗುರುತು ಚೀಟಿ ವಿತರಣೆ ಹಾಗೂ ಮಾಹಿತಿ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಹಾಗೂ ಬಿ.ಎಂ.ಎಸ್ ಗ್ರಾಮ ಸಮಿತಿ ಕೊಕ್ಕಡ ಇದರ ಅಶ್ರಯದಲ್ಲಿ ನೋಂದಾವಣೆಗೊಂಡ ಕಟ್ಟಡ ಕಾರ್ಮಿಕರಿಗೆ ಗುರುತು ಚೀಟಿ ವಿತರಣೆ ಮತ್ತು ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಹರಿಹರ ಮಂಟಪದಲ್ಲಿ ಜರುಗಿತು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಕೃಷ್ಣ ಭಟ್ ಹಿತ್ತಿಲು ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಯಕ್ತಿಕ ಹಿತಾಸಕ್ತಿಯೊಂದಿಗೆ ಸಮಾಜದ ಹಿತಾಸಕ್ತಿಯ ಕೆಲಸ ಮಾಡುವುದು ಸಂಘದ ದ್ಯೇಯವಾಗಬೇಕಿದೆ. ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿರುವ ಭಾರತೀಯ ಮಜ್ದೂರ್ ಸಂಘ ಭಾರತದ ಘನತೆಯನ್ನು ಎತ್ತಿ ಹಿಡಿಯುವ ಸಂಘನೆಯಾಗಿದೆ ಎಂದರು. ತಾಲೂಕು ಬಿ.ಎಂ.ಎಸ್ ಅಧ್ಯಕ್ಷ ಉದಯ ಬಿ. ಕೆ ಹಾಗೂ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ರವರು ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯ ಮತ್ತು ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೊಕ್ಕಡ ಬಿ.ಎಮ್.ಎಸ್ ಸಂಘ ಗ್ರಾಮ ಸಮಿತಿಯ ವತಿಯಲ್ಲಿ ಮೊದಲ ಹಂತದಲ್ಲಿ ನೋಂದಾವಣೆಗೊಂಡ ಕಟ್ಟಡ ಕಾರ್ಮಿಕರ ೩೯ ಗುರುತು ಚೀಟಿಯನ್ನು ಸಾಂಕೇತಿಕವಾಗಿ ತಾಲೂಕು ಸಮಿತಿಯ ಪ್ರಮುಖರು ಮತ್ತು ಸಭಾ ಅತಿಥಿಗಳು ವಿತರಣೆ ಮಾಡಿದರು.
ಕೊಕ್ಕಡ ಸಿ.ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸಿ.ಎ ಬ್ಯಾಂಕ್‌ನ ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಬಿ.ಎಮ್.ಎಸ್ ಗ್ರಾಮ ಸಮಿತಿ ಕಾರ್ಯದರ್ಶಿ ವಸಂತ ನಾಯ್ಕ್ ಓಣಿತ್ತರ್, ಜತೆಕಾರ್ಯದರ್ಶಿ ಶೇಖರ್ ಗಾಣಗಿರಿ ಉಪಸ್ಥಿತರಿದ್ದರು. ಯೋಗೀಶ್ ಅಲಂಬಿಲ ಸ್ವಾಗತಿಸಿ, ಕೇಶವ ಹಲ್ಲಿಂಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.