HomePage_Banner_
HomePage_Banner_

ಝೆನ್ ಕಾರಿನೊಳಗೆ ನಾಗರಹಾವು: ತಪ್ಪಿದ ದೊಡ್ಡ ಅನಾಹುತ

ಬೆಳ್ತಂಗಡಿ: ಪಾರ್ಕಿಂಗ್ ಮಾಡಿದ ಗಾಡಿಯೊಳಗೆ ನಾಗರಹಾವು ಪತ್ತೆಯಾಗಿದ್ದು, ಕಾರಿನಲ್ಲಿ ಇದ್ದ ಸಹಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳ್ತಂಗಡಿಯ ಅಮರ್ ಡ್ರಗ್ ಹೌಸ್ ಸ್ಥಳದಲ್ಲಿ ನಡೆದಿದೆ.

ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವಿಣ್ ಮತ್ತು ಮೀನಾ ದಂಪತಿ ತಮ್ಮ ಪುತ್ರ ಕೃತಿಕ್ ರೊಂದಿಗೆ ಝೆನ್ ಕಾರಿನಲ್ಲಿ ಪ್ರಯಾಣಿಸುತಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ಮುಳಿಯ ಡ್ರಗ್ ಹೌಸ್ ಮುಂಭಾಗದಲ್ಲಿ  ಗಾಡಿಯನ್ನು ಪಾರ್ಕಿಂಗ್ ಮಾಡಿ, ಔಷಧಿ ಖರೀದಿಸಿ ಹಿಂದಿರುಗಿದ ಸಂದರ್ಭದಲ್ಲಿ ಕಾರಿನ ಸೀಟಿನ ಕೆಳಭಾಗದಲ್ಲಿದ್ದ ನಾಗರಹಾವನ್ನು ಕಂಡು ಭಯಭೀತರಾಗಿದ್ದಾರೆ

ಪ್ರವೀಣ್ ರವರು ಚಾಲಕ ಸೀಟಿನಲ್ಲಿ ಕುಳಿತಿದ್ದು, ಅವರ ಪತ್ನಿ ಮತ್ತು ಪುತ್ರ ಹಿಂಭಾಗದ ಸೀಟಿನಲ್ಲಿ ಆಸೀನರಾಗಲು ಕಾರಿನ ಬಾಗಿಲು ತೆರೆದ ಸಂದರ್ಭದಲ್ಲಿ ನಾಗರಹಾವನ್ನು ಕಂಡು, ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಉಜಿರೆಯ ಸ್ನೇಕ್ ಜೋಯ್ ಯವರು ಸೂಕ್ತ ಕಾರ್ಯಾಚರಣೆ ನಡೆಸಿ ನಾಗರ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು , ಆ ಹಾವನ್ನು  ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿಕೊಂಡು  ಕಾಡಿಗೆ ಬೀಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸ್ನೇಕ್ ಜೋಯ್  ರವರಿಗೆ ಹಾವು ಹಿಡಿಯಲು ಬೆಳ್ತಂಗಡಿ ದ್ವಾರಕ ಡ್ರೈವಿಂಗ್ ಸ್ಕೂಲಿನ ಅಲ್ವಿನ್ , ಲಾಯಿಲ ರವಿಚಂದ್ರರವರು ಸಹಕಾರ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.