HomePage_Banner_
HomePage_Banner_

ಧರ್ಮಸ್ಥಳ ಗ್ರಾ.ಪಂ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್  ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆ ಸ್ವಚ್ಛೋತ್ಸವ -ನಿತ್ಯೋತ್ಸವ ಮಾಸಾಚರಣೆ ಪ್ತಯುಕ್ತ ಧರ್ಮಸ್ಥಳ ಗ್ರಾ.ಪಂ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ ಕಾರ್ಯಕ್ರಮ ಅ.30 ರಂದು ಜರುಗಿತು.

ಈ ಸಂದರ್ಭದಲ್ಲಿ ಸ್ವಚ್ಛತಾ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು

ದ.ಕ ಜಿಲ್ಲಾ ಪಂಚಾಯತ್  ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು  ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ  ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ  ಕೊರಗಪ್ಪ ನಾಯ್ಕ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಧನಲಕ್ಷ್ಮೀ ಜನಾರ್ದನ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಜಿ.ಪಂ ಸ್ವಚ್ಛತಾ ಅಭಿಯಾನದ ಸಂಚಾಲಕ ನವೀನ್,ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ಧರ್ಮಸ್ಥಳ ಬೀಡು ವ್ಯವಸ್ಥಾಪಕ ರಾಜೇಂದ್ರ  ಭಾಗವಹಿಸಿದ್ದರು

ಈ ಸಂದರ್ಭದಲ್ಲಿ  ವೇದಿಕೆಯಲ್ಲಿರುವ ಗಣ್ಯರು ಸ್ವಚ್ಛತಾ ಕರಪತ್ರ ಬಿಡುಗಡೆಗೊಳಿಸಿದರು

ಧರ್ಮಸ್ಥಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ ಕೆ ಕಾರ್ಯದರ್ಶಿ ವೆಂಕಪ್ಪ ಗೌಡ, ಆಡಳಿತಾಧಿಕಾರಿ ಡಾ.ಜಯಕೀರ್ತಿ ಜೈನ್, ಗ್ರಾ.ಪಂ ಮಾಜಿ ಸದಸ್ಯರು,ಗ್ರಾ.ಪಂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.