HomePage_Banner_
HomePage_Banner_

 ಕಾಶಿಬೆಟ್ಟುವಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆ ಶುಭಂ ಶುಭಾರಂಭ

ಉಜಿರೆ: ಇಲ್ಲಿಯ ಕಾಶಿಬೆಟ್ಟುವಿನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಎ.ಎಂ ಇಂಪೀರಿಯಲ್ ಟವರ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮಳಿಗೆ ‘ಶುಭಂ’ ಇದರ ಉದ್ಘಾಟನೆಯು ಅ.30ರಂದು ಜರುಗಿತು

 

  

ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ  ಮಾತನಾಡಿ ನಮ್ಮ ಊರಿನಲ್ಲಿ ಸುಂದರವಾದ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆ ಶುಭಂ ಶುಭಾರಂಭಗೊಂಡಿದೆ. ಗ್ರಾಹಕರಿಗೆ ನೇರ ಖರೀದಿಗೆ ಅವಕಾಶ. ಉತ್ತಮ ದರ ಐವತ್ತು ಸಾವಿರದ ಖರೀದಿಗೆ ಇಲ್ಲಿ ಕೇವರ ಮೂವತ್ತು ಸಾವಿರದಲ್ಲಿ ಸಿಗುತ್ತದೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳು ಇಲ್ಲಿ ದೊರೆಯುತ್ತದೆ. ಇವರ ಉದ್ಯಮದ ಬಗ್ಗೆ ಹರಿದ್ವಾರದಲ್ಲಿ  ನನಗೆ ಗೊತ್ತಿದೆ  ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ  ಉಜಿರೆ  ಅನುಗ್ರಹ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ವಂ. ಉದಯ್ ಜೋಸೆಫ್,   ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ಧಿ ಬಿ. ಭುಜಬಲಿ, ಶುಭಂ ಸಂಸ್ಥೆಯ  ಪ್ರಾದೇಶಿಕ ಮುಖ್ಯಸ್ಥ ಲೋಹಿತ್ ಎಂ, ಕಾಶಿಬೆಟ್ಟು ಎ.ಎಂ ಇಂಪೀರಿಯಲ್ ಟವರ್ ಮಾಲಕ ಎಸ್.ಮಹಮ್ಮದ್ ಶರೀಫ್,  ಆಡಳಿತ ಪಾಲುದಾರರಾದ ರಾಜೇಶ್ ಸುವರ್ಣ, ಸುನೀಲ್ ಕುಮಾರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.

ರಘುರಾಮ ಶೆಟ್ಟಿ ಸಾಧನಾ ಉಜಿರೆ, ಬಿಎಸ್ಎನ್ ಎಲ್ ನಿವೃತ್ತ  ಅಧಿಕಾರಿ ಅಣ್ಣಿ ಪೂಜಾರಿ,ಕೃಷಿಕ ಅರುಣ್ ರೆಬೆಲ್ಲ್ಲೊ, ಕಿರಣ್ ಕುಮಾರ್, ಪುಷ್ಪರಾಜ್ ಬಂಗೇರ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಇಂಜಿನಿಯರ್ ಸೂರ್ಯನಾರಾಯಣ, ಗೋಪಾಲ ಸುವರ್ಣ, ಮಾಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಸಂಜೀವ ಪೂಜಾರಿ, ಉಮೇಶ್ ಸುವರ್ಣ, ರಮೇಶ್, ನವೀನ್ ಕುವೆತ್ಯಾರು, ಅರುಣ್ ಕುಮಾರ್ ಮೊರಂಪೇಲು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಗೋಪಾಲ  ಅಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.