HomePage_Banner_
HomePage_Banner_

ಕಡಿರುದ್ಯಾವರ ಡೀಕಯ್ಯ ಗೌಡರ ತೋಟಕ್ಕೆ ನುಗ್ಗಿದ ಆನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿಯೊಂದು ಹಿಂದೆ ಹೋಗಲಾಗದೆ ತೋಟದಲ್ಲಿ ಸಿಲುಕಿಕೊಂಡ ಘಟನೆ ಅ.29ರಂದು ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.

  ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶಗೊಳಿಸಿದ್ದು, ನಂತರ ತೋಟದಿಂದ ಕಾಡಿಗೆ ಮರಳುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಸಿಲುಕಿದ ಪ್ರಕರಣ ಬೆಳಕಿಗೆ ಬಂದಿದೆ.  ತೋಟದಲ್ಲಿ ಮರಿಯಾನೆ ಸಿಲುಕಿಕೊಂಡಿದ್ದರಿಂದ ಆನೆಗಳ ಹಿಂಡು ತೋಟದ  ಸಮೀಪದ ಕಾಡಿನಲ್ಲಿ  ಬೀಡುಬಿಟ್ಟಿತ್ತು.

ಬೆಳಗ್ಗೆ ಡೀಕಯ್ಯ ಗೌಡ ರವರು ತೋಟಕ್ಕೆ ಭೇಟಿ ನೀಡಿದ ಸಂದರ್ಭ ಈ ವಿಚಾರ ತಿಳಿದಿದ್ದು, ಅವರು ಆ ಕೂಡಲೇ ಅರಣ್ಯ ಇಲಾಖೆಗೆ ವಿಚಾರ ತಿಳಿಸಿದ್ದಾರೆ. ಆನೆಮರಿಯನ್ನು ನೋಡಲು ಹಲವಾರು ಮಂದಿ ಜನ ಸಮೂಹವೇ ಸೇರಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ  ತ್ಯಾಗರಾಜ್ ಮತ್ತು ಸಿಬ್ಬಂದಿಗಳು  ಸೂಕ್ತ ಕಾರ್ಯಾಚರಣೆ ನಡಿಸಿ ಮರಿ ಆನೆಯನ್ನು ಹಿಡಿದು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.