HomePage_Banner_
HomePage_Banner_

ಮಡಂತ್ಯಾರಿನಲ್ಲಿ ಎ.ಎಸ್. ವಾಯುಮಾಲಿನ್ಯ ಮತ್ತು ಇನ್ಶೂರೆನ್ಸ್ ಸೆಂಟರ್ ಶುಭಾರಂಭ

ಮಡಂತ್ಯಾರು : ಇಲ್ಲಿನ ಮರಿಯಾ ಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ  ಎ.ಎಸ್. ವಾಯುಮಾಲಿನ್ಯ ಮತ್ತು ಇನ್ಶೂರೆನ್ಸ್ ಸೆಂಟರ್ ಇದರ ಉದ್ಘಾಟನೆಯು ಇತ್ತೀಚೆಗೆ ಜರುಗಿತು.

ನೂತನ ಸಂಸ್ಥೆಯನ್ನು ಜನಾಬ್ ಎಮ್ ಅಬ್ದುಲ್ಲ ಮದ್ದಡ್ಕ  ಉದ್ಘಾಟಿಸಿದರು. ನೂರುಲ್ ಹುದಾ ಜುಮಾ ಮಸೀದಿಯ ಖತೀಬ  ಮುಹಮ್ಮದ್ ರಫೀಖ್ ಅಹ್ಸನಿ ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ  ಜಮಿಯಾತುಲ್ ಫಲಾಹ್ ಬೆಳ್ತಂಗಡಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್,  ಎಪ್ರೋಜಿನ್ ವೇಗಸ್ ಮಡಂತ್ಯಾರು,ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಬ್ಬೊನ್ ಮದ್ದಡ್ಕ ಮದ್ದಡ್ಕ, ಹೆಲ್ಪ್ ಲೈನ್ ವಾಟ್ಸಾಪ್ ಗ್ರೂಪಿನ ಅಧ್ಯಕ್ಷ ಝಹೀರ್ ಬಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು  ರೆ|ಫಾ| ಬೇಸಿಲ್ ವಾಸ್ , ಪಾರೆಂಕಿ ಶ್ರೀ ಮಹಿಷಮರ್ಧಿನಿಸೇವಾ ಟ್ರಸ್ಟ್ ಅಧ್ಯಕ್ಷ ಜಯಂತ್ ಶೆಟ್ಟಿ,  ಮಡಂತ್ಯಾರು ಮರಿಯಾ ಜ್ಯೋತಿ ಕಾಂಪ್ಲೆಕ್ಸ್ ಮಾಲಕ  ಆಲ್ಬರ್ಟ್ ಡಿಸೋಜಾ  ಈ ಸಮಾರಂಭಕ್ಕೆ ಶುಭ ಹಾರೈಸಿದರು.

ಸಂಸ್ಥೆ ಮಾಲಕ  ಮಹಮ್ಮದ್ ಸಾದಿಕ್ ಮದ್ದಡ್ಕ ಅತಿಥಿ ಗಣ್ಯರನ್ನು ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಗ್ರಾಹಕರ ಹಾಗೂ ಹಿತೈಷಿಗಳ ಸಹಕಾರ ಕೋರಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.