HomePage_Banner_
HomePage_Banner_

ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಉಜಿರೆ ರಿಕ್ಷಾ ಚಾಲಕ- ಮಾಲಕರ ಸಂಘದಿಂದ ವಿಶ್ವ ಪೋಲಿಯೋ ದಿನಾಚರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ ಉಜಿರೆ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪೋಲಿಯೋ ದಿನಾಚರಣೆಯನ್ನು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದ ಆವರಣದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್‌ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ರೋಟರಿ ಜಿಲ್ಲೆಯ ಪಲ್ಸ್ ಪೋಲಿಯೋ ಸಹಾಯಕ ಚೇರ್ಮನ್  ಸುರೇಂದ್ರ ಕಿಣಿ, ಬೆಳ್ತಂಗಡಿ ರೋಟರಿ ಕ್ಲಬ್ ಪಲ್ಸ್ ಪೋಲಿಯೊ ಚೇರ್ಮನ್  ಡಾ.ರಾಘವೇಂದ್ರ ಪಿದಮಲೆ, ಕ್ಲಬ್ ನ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ರಿಕ್ಷಾ ಮಾಲಕ ಚಾಲಕರ ಸಂಘದ ಅಧ್ಯಕ್ಷ  ಉಮೇಶ್   ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಈ ಸಂಧರ್ಭದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವ ಬಗ್ಗೆ ಸ್ಟಿಕ್ಕರ್ ಒಂದನ್ನು ಬಿಡುಗಡೆಗೊಳಿಸಿ ರಿಕ್ಷಾ ಚಾಲಕರಿಗೆ ನೀಡಲಾಯಿತು. ನಂತರ ಉಜಿರೆ ಹಿರಿಯ ರಿಕ್ಷಾ ಚಾಲಕ ಬಾಬು ಗೌಡ ಅವರನ್ನು ಸನ್ಮಾನಿಸಲಾಯಿತು. ರಿಕ್ಷಾ ಚಾಲಕರ ನಾಲ್ಕು ಜನ ಮಕ್ಕಳಿಗೆ ಕಲಿಕೆಗಾಗಿ ಪ್ರೋತ್ಸಾಹ ಧನವನ್ನು ಕೊಡಲಾಯಿತು. ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೂ.16100 ( 225 ಡಾಲರ್)ಹಣ ವನ್ನು ಪೋಲಿಯೋ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗೆ ದೇಣಿಗೆಯಾಗಿ ನೀಡಲಾಯಿತು. ಆಗಮಿಸಿದ್ದ ರಿಕ್ಷಾ ಚಾಲಕರಿಗೆ ರೋಟರಿ ಕ್ಲಬ್ ವತಿಯಿಂದ ಫೇಸ್ ಮಾಸ್ಕ್ ಗಳನ್ನು ನೀಡಲಾಯಿತು.

ಶ್ರೀ ಕುಮಾರ್ ಪ್ರಾರ್ಥಿಸಿ,  ರೋಟರಿ ಕ್ಲಬ್ ನ ಅಧ್ಯಕ್ಷ ಬಿ.ಕೆ.ಧನಂಜಯ ರಾವ್  ಸ್ವಾಗತಿಸಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಂದ್ರ ಕಿಣಿಯವರು ಪೋಲಿಯೊ ನಿರ್ಮೂಲನೆಯಲ್ಲಿ ರೋಟರಿಯ ಪಾತ್ರ ಹಾಗೂ ಜವಾಬ್ದಾರಿಯನ್ನು ಸಭೆಗೆ ತಿಳಿಸಿದರು.  ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ ಕೆ.ವಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.