HomePage_Banner_
HomePage_Banner_

ಉಜಿರೆ ಎಸ್. ಡಿ .ಎಂ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿ.ಟಿ ಸ್ಕ್ಯಾನ್ ಉಪಕರಣ ಲೋಕಾರ್ಪಣೆ

ಜನರ ಆರೋಗ್ಯ ರಕ್ಷಣೆಗೆ ಈ ವ್ಯವಸ್ಥೆ  ಅಮೃತ ಸಂಜೀವಿನಿ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆಯಲ್ಲಿ ಸುಮಾರು ರೂ. 1.50 ಕೋಟಿ ವೆಚ್ಚದಲ್ಲಿ ನೂತನವಾಗಿ ಆಳವಡಿಸಲಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರವ 32 ಸ್ಲೈಸ್ ಸಿ.ಟಿ ಸ್ಕ್ಯಾನ್ ಉಪಕರಣವನ್ನು ಅ.29ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲಿಸಿ ಲೋಕಾರ್ಪಣೆಗೈದರು

ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಮತ್ತು ತಾಲೂಕಿನ ಗಡಿಭಾಗದ ನಾಗರಿಕರಿಗೆ ಆತ್ಯಾಧುನಿಕವಾದ ಸಿಟಿಸ್ಕ್ಯಾನ್‍ನ್ನು ಉಜಿರೆ ಆಸ್ಪತ್ರೆಯಲ್ಲಿ ಅಳವಡಿಸಿರುವುದರಿಂದ ಇವರೆಲ್ಲರ ಆರೋಗ್ಯ ರಕ್ಷಣೆಗೆ ಈ ವ್ಯವಸ್ಥೆ ಅಮೃತ ಸಂಜೀವಿನಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿಯ ಕಾರ್ಯನಿರ್ವಹಕ ನಿರ್ದೇಶಕರಾದ ಡಾ| ಎಲ್.ಹೆಚ್ ಮಂಜುನಾಥ್ ಮಾತನಾಡಿ, ಅಪಘಾತ ಸೇರಿದಂತೆ ಅಗತ್ಯ ಚಿಕಿತ್ಸೆಗೆ ಸಿಟಿ ಸ್ಕ್ಯಾನ್‍ನ ಅಗತ್ಯವಿದ್ದು, ಇಲ್ಲಿಯವರು ಮಂಗಳೂರಿಗೆ ಹೋಗುವುದಾದರೆ ಸುಮಾರು 5ರಿಂದ 10 ಸಾವಿರ ರೂ.ವರೆಗೆ ಖರ್ಚು ಆಗುತ್ತದೆ. ಆದರೆ ಇಲ್ಲಿ ರೂ. 1,500ರಿಂದ ರೂ.3500ರೊಳಗೆ ಕಡಿಮೆ ವೆಚ್ಚದಲ್ಲಿ ವ್ಯವಸ್ಥೆಯಿದೆ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವು ಇದೆ ಎಂದರು.

ಶ್ರೀ ಧ.ಮಂ.ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಶ್ರೀ ಧ.ಮಂ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಾಶೀನಾಥ್ ಶೆಣೈ ವಂದಿಸಿದರು.

ಸಿಟಿ ಸ್ಕ್ಯಾನ್‍ನಲ್ಲಿ ಬ್ರೈನ್ ಟ್ಯೂಮರ್, ಪಾಶ್ರ್ವವಾಯು, ಕಿಡ್ನಿ, ಶ್ವಾಸಕೋಶಗಳ ತಪಾಸಣೆ, ಗಂಭೀರ ಸ್ವರೂಪದ ಅಪಘಾತಗಳ ಆದಾಗ ಶರೀರಿದ ಗಾಯಗಳು, ಆಂತರಿಕ ರಕ್ತಸ್ರಾವ ಪರೀಕ್ಷೆ , ಮೂಳೆಗೆಡ್ಡೆಗಳು, ಮೂಳೆ ಮುರಿತ, ಸ್ನಾಯು ಮತ್ತು ಮೂಳೆಗಳು ಅಸ್ವಸ್ಥತೆಗಳನ್ನು ನಿರ್ಣಯಿಸಿ ಗೆಡ್ಡೆ, ಸೋಂಕು ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸ್ಥಳವನ್ನು ನಿಖರವಾಗಿ ಗುರುತಿಸಲು ಈ ವೈದ್ಯಕೀಯ ಉಪಕರಣ ಸಹಕಾರಿಯಾಗಿದೆ. ಶಸ್ತ್ರ ಚಿಕಿತ್ಸೆ, ಬಯಾಪ್ಸಿ ಮತ್ತು ವಿಕಿರಣ ಚಿಕಿತ್ಸೆಯಂತಹ ಮಾರ್ಗದರ್ಶಿ ವಿಧಾನಗಳಲ್ಲಿ ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶದ ಗಂಟುಗಳು ಮತ್ತು ಯಕೃತಿನ ರೋಗ ಪತ್ತೆ, ಕೊರೊನಾ ರೋಗಿಗಳ ಶ್ವಾಸಕೋಶ ತಪಾಸಣೆಯಲ್ಲಿ ಸ್ವಷ್ಟವಾದ ವೈದಕೀಯ ವರದಿ ಪಡೆಯಬಹುದಾಗಿದೆ ಎಂದು ಡಾ. ಕಾರ್ತಿಕ ಮಾಹಿತಿ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.