HomePage_Banner_
HomePage_Banner_

ಕೊಯ್ಯೂರು: ಸಿವಿಲ್ ಗುತ್ತಿಗೆದಾರ ಅಬ್ಬಾಸ್ ಕಲ್ಲಗುಡ್ಡೆ ಹೃದಯಾಘಾತದಿಂದ ನಿಧನ

ಕೊಯ್ಯೂರು; ಕೊಯ್ಯೂರು ಗ್ರಾಮದ ಮಲೆಬೆಟ್ಟು ಕಲ್ಲಗುಡ್ಡೆ ನಿವಾಸಿ ಗುತ್ತಿಗೆದಾರ ಹಾಗೂ ಕೃಷಿಕ, ಕಾಶಿಬೆಟ್ಟು ನಿವಾಸಿ ಯು.ಕೆ ಮುಹಮ್ಮದ್ ಹನೀಫ್ ಅವರ ಬಾವ ಅಬ್ಬಾಸ್ ಕಲ್ಲಗುಡ್ಡೆ (53ವ.) ಅವರು ಹೃದಯಾಘಾತದಿಂದ ಅ.23 ರಂದು ನಿಧನರಾಗಿದ್ದಾರೆ.

ಬೆಳಗ್ಗೆ ಇದ್ದಕ್ಕಿದ್ದಂತೆ ಹೃದಯನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ದಾರಿ ಮಧ್ಯೆ ಅವರು ಅಸುನೀಗಿದರು.

ಮೃತರು ಸಿವಿಲ್ ಗುತ್ತಿಗೆದಾರರಾಗಿ, ಮಾಲಿಕರಿಂದ ಕೃಷಿ ಭೂಮಿ ವಹಿಸಿ ನಿರ್ವಹಣೆ ವ್ಯವಹಾರ ಇತ್ಯಾಧಿಯಾಗಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ವ್ಯವಹರಿಸುತ್ತಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮೃತರು ಪತ್ನಿ ಆಮಿನಾ, ಓರ್ವ ಪುತ್ರ ಮಸೂದ್, ನಾಲ್ವರು ಪುತ್ರಿಯರಾದ ಹಸೀನಾ, ಅನೀಸಾ, ಆಬಿದಾ ಮತ್ತು ನಸೀಬಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.