HomePage_Banner_
HomePage_Banner_

ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತಾಲೂಕಿನಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯತ್ ನಿರ್ಮಾಣವನ್ನು ಕಾರ್ಯಕರ್ತರು ಮಾಡಲಿದ್ದಾರೆ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ರೂ.600 ಕೋಟಿಗೂ ಮಿಕ್ಕಿ ಕಾಮಗಾರಿಗಳು ನಡೆದಿದ್ದು, ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 46 ಗ್ರಾಮ ಪಂಚಾಯತ್ ಗಳಲ್ಲಿ 46 ಪಂಚಾಯತ್‌ಗಳಲ್ಲಿಯೂ ಬಿಜೆಪಿ ಗೆಲವು ಸಾಧಿಸಲಿದ್ದು, ಕಾಂಗ್ರೆಸ್ ಮುಕ್ತ ಪಂಚಾಯತ್ ನಿರ್ಮಾಣವನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಅ.27 ರಂದು ಬೆಳ್ತಂಗಡಿ ಶ್ರೀ ಧ.ಮಂ ಸಭಾಂಗಣದಲ್ಲಿ ಜರುಗಿದ ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ದೇಶ ಹಿತಕ್ಕಾಗಿ ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ, ಕೋಮುವಾದ ಜಾತೀಯವಾದ, ಭ್ರಷ್ಟಾಚಾರವನ್ನು ದೇಶಕ್ಕೆ ಪರಿಚಯಿಸಿರುವುದು ಅವರ ಕೊಡುಗೆಯಾಗಿದೆ. ಭ್ರಷ್ಟಾಚಾರ ತುಂಬಿದ ಭಾರತಕ್ಕೆ ಶ್ರೇಷ್ಠ ನಾಯಕತ್ವದ ಅಗತ್ಯವಿದ್ದಾಗ ಎದ್ದು ನಿಂತವರೇ ಪ್ರಧಾನಿ ನರ್ರೇಂದ್ರಮೋದಿಯವರು ಎಂದರು

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಚೆನ್ನಕೇಶವ, ಜಿಲ್ಲೆಯ ಪ್ರಭಾರಿ ಭರತೇಶ್ ಉಪಸ್ಥಿತರಿದ್ದರು.

ಭಾರ್ಗವಿ ಅಠವಳೆ ವಂದೇಮಾತರಂ ಗೀತೆ ಹಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ  ಸುಬ್ರಹ್ಮಣ್ಯ ಗೌಡ ಕೈಕುರೆ ಸ್ವಾಗತಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.