ಪಿಲ್ಯ ಗುಡ್ ಫ್ಯೂಚರ್ ಶಾಲೆಗೆ ನುಗ್ಗಿದ ಕಳ್ಳರು: ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಹಣಕ್ಕಾಗಿ ಹುಡುಕಾಟ

 ಅಳದಂಗಡಿ : ಇಲ್ಲಿಯ ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ದಾಖಲೆ ಪತ್ರಗಳನ್ನು ಸುಟ್ಟು ಹಾಕಿ, ಹಣಕ್ಕಾಗಿ ಹುಡುಕಾಡಿದ ಘಟನೆ ಅ.26 ರಂದು ರಾತ್ರಿ ನಡೆದಿದೆ.


ಶಾಲೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜಿನ ಬೀಗವನ್ನು ಒಡೆದು ತೆಗೆದು, ಅದರಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಕಾಗದವನ್ನು ಬೆಂಕಿಹಾಕಿ ಸುಟ್ಟಿರುವುದು ಕಂಡು ಬಂದಿದೆ.


ಇದು ಹಣಕ್ಕಾಗಿ ಕಳ್ಳರು ನಡೆಸಿದ ಕೃತ್ಯವೇ ಅಥವಾ ದುರುದ್ದೇಶದಿಂದ ನಡೆದ ಕೃತ್ಯವೋ ಎಂದು ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಜೊತೆಗೆ ಶಾಲೆಗೆ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾದ ವಯರನ್ನು ಕಳ್ಳರು ಸುಟ್ಟುಹಾಗಿದ್ದಾರೆ.


ಬೆಳಿಗ್ಗೆ ಶಾಲಾ ಮುಖ್ಯ ಶಿಕ್ಷಕರು ಬಂದು ನೋಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ದಾಖಲೆಗಳಿಗೆ ಹಾನಿ ಆಗಿಲ್ಲ: ಸಂಚಾಲಕ 

ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಆದರೆ ಯಾವುದೇ ಶಾಲಾ ದಾಖಲಾತಿಗೆ ಹಾನಿಯಾಗಿಲ್ಲ, ಎಲ್ಲವೂ ಸಮಪ೯ಕವಾಗಿದೆ ಎಂದು ಸಂಚಾಲಕ ನಾಸೀರ್ ಖಾನ್ ಪಿಲ್ಯ ತಿಳಿಸಿದ್ದಾರೆ. ಅಗತ್ಯ ಕಾಯ೯ಕ್ರಮ ನಿಮಿತ್ತ ಬೆಂಗಳೂರು ನಲ್ಲಿರುವ ಅವರು ಸುದ್ದಿ ಗೆ ಈ ಮಾಹಿತಿ ನೀಡಿದ್ದು,  ಷೋಷಕರು ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಸ್ವಷ್ಟ ಪಡಿಸಿ ದ್ದಾಾರೆ. 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.