ಕೊಕ್ಕಡ ಸಿಐಡಿ ಶಂಕರ್ ಇನ್ನಿಲ್ಲ

ಕೊಕ್ಕಡ ಸಿಐಡಿ ಶಂಕರ್ ಇನ್ನಿಲ್ಲ


ಕೊಕ್ಕಡ: ಕೊಕ್ಕಡ -ನೆಲ್ಯಾಡಿ- ಅರಸಿನಮಕ್ಕಿ -ರೆಖ್ಯಾ ಪರಿಸರದ ಜನತೆಗೆ ಈ ವ್ಯಕ್ತಿ ಚಿರಪರಿಚಿತರು. ಸುಮಾರು 25 ವರ್ಷ ಗಳಿಗೂ ಅಧಿಕ ಕಾಲದಿಂದ ಇಲ್ಲಿ ಸುತ್ತಾಡಿಕೊಂಡು ಅಲ್ಲಿ ವ್ಯಾಪಾರ ನಡೆಸುವ ಜನರು ನೀಡಿದನ್ನು ತಿಂದು, ಯಾರಿಗೂ ತೊಂದರೆ ನೀಡದೆ ಬದುಕಿದ ವ್ಯಕ್ತಿ ಈ ಶಂಕರ್ ರವರು.
ಆರಂಭಿಕ ದಿನಗಳಲ್ಲಿ ಈ ವ್ಯಕ್ತಿಯ ಬಗ್ಗೆ ಜನ ಆಡಿಕೊಳ್ಳುತ್ತಿದ್ದ ರೀತಿ ಹೀಗಿತ್ತು. ಇಲ್ಲಿ ಯಾವುದೋ ಮರ್ಡರ್ ಆಗಿದೆ. ಅದಕ್ಕೆ ಪೋಲಿಸ್ ಇಲಾಖೆ ಇವರನ್ನು ಆರೋಪಿಯನ್ನು ಹಿಡಿಯುವ ಸಲುವಾಗಿ ಮಾರುವೇಷದಲ್ಲಿ ಕಳುಹಿಸಿದ್ದಾರೆ” ಎಂದುಕೊಂಡು ಇವರಿಗೆ ಸಿಐಡಿ ಶಂಕರ್ ಎಂದೆ ಕರೆಯುತ್ತಿದ್ದರು.
ಇವರು ಇದ್ದದ್ದು ಕೂಡ ಹಾಗೆಯೇ: ಕೈಯಲ್ಲೊಂದು ಕೋಲು, ಮೈತುಂಬ ಕೆಸರು ಮೆತ್ತಿಕೊಂಡ ಇವರ ಸಧೃಢ ಮೈಕಟ್ಟು ಇವರನ್ನು ಅದೇ ರೀತಿಯಲ್ಲಿ ಬಿಂಬಿಸಿತ್ತು.
ಇವರು ಎಲ್ಲೇ ಹೋಗುವುದು ಕೂಡ ನಡೆದುಕೊಂಡೆ. ಇಂದು ಒಂದು ಕಡೆ ಸಿಕ್ಕರೆ  ನಾಳೆ ಮತ್ತೊಂದು ಕಡೆ ಇರುತ್ತಿದ್ದರು.
ಬಹಳ ವರ್ಷಗಳಿಂದ ಈ ಭಾಗದ ಒಡನಾಟದ ಬಳಿಕ ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ .ಇನ್ನೂ ಶಂಕರ್ ಅವರ ನೆನಪು ಮಾತ್ರ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.