HomePage_Banner_
HomePage_Banner_

ಯೋಗೀಶ್ ಕೈರೋಡಿಯವರ ‘ಸಂತೆಯಲ್ಲಿ ಅಕ್ಷರದ ಆನಂದ’ ಕೃತಿ ಬಿಡುಗಡೆ

ಆರಂಬೋಡಿ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಕೃತಿ ತಲುಪುವ ಕಾರ್ಯವಾಗಬೇಕು. ವಿವೇಚನ, ಕೃತಿವಿಚಾರ ಹಾಗೂ ವ್ಯಕ್ತಿ ವೈಶಿಷ್ಟ್ಯ ಎಂಬ ಮೂರು ಭಾಗಗಳಲ್ಲಿ ಮೂಡಿ ಬಂದ ಕೈರೋಡಿಯವರ ಬರಹಗಳು ಸಂಕೀರ್ಣ ವಿಷಯ ಮತ್ತು ಸರಳ ನಿರೂಪಣೆಯ ಮೂಲಕ ಮಹತ್ವಪೂರ್ಣವಾದುದು ಎಂದು ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ನುಡಿದರು.
ಅವರು ಸಿದ್ಧಕಟ್ಟೆಯ ಯಕ್ಷಮಿತ್ರ ಶ್ರೀ ಕ್ಷೇತ್ರ ಪೂಂಜದ ವತಿಯಿಂದ ನಡೆದ ಸಮಾರಂಭದಲ್ಲಿ ಲೇಖಕ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ ಕೈರೋಡಿಯವರ ‘ಸಂತೆಯಲ್ಲಿ ಅಕ್ಷರದ ಆನಂದ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿ, ಕಲಾ ಪೋಷಕ ಸುಬ್ರಹ್ಮಣ್ಯ ಭಟ್, ಎ.ಪಿ.ಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ರತ್ನ ಕುಮಾರ್ ಚೌಟ, ಹರಿಪ್ರಸಾಸ್ ಶೆಟ್ಟಿ ಕುರುಡಾಡಿ, ಪ್ರಕಾಶ್ ಆಚಾರ್ಯ, ರಾಮಾಂಜನೇಯ ಕ್ಷೇತ್ರದ ಧರ್ಣಪ್ಪ ಶೆಟ್ಟಿ ಪೂವಳ, ಉದ್ಯಮಿ ಕಿರಣ್ ಕುಮಾರ್ ಮಂಜಿಲ ಉಪಸ್ಥಿತರಿದ್ದರು.
ಕೃತಿ ಲೇಖಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಶೆಟ್ಟಿ ಪಾಲ್ಯ ಸನ್ಮಾನಿತರನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಯಕ್ಷಮಿತ್ರ ಸಿದ್ಧಕಟ್ಟೆ ಪ್ರಶಸ್ತಿ ಪ್ರದಾನ ಹಾಗೂ ಭಕ್ತ ಮಯೂರಧ್ವಜ ಯಕ್ಷಗಾನ ತಾಳಮದ್ದಳೆ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.