HomePage_Banner_
HomePage_Banner_

ನೆರಿಯ ಜಯಕೇಸರಿ ಯುವಜನ ಸಂಘದ ಕಚೇರಿ ಉದ್ಘಾಟನೆ

ನೆರಿಯ: ಜಯಕೇಸರಿ ಯುವಜನ ಸಂಘ ನೆರಿಯ ಇದರ ಕಛೇರಿ ಶುಭಾರಂಭದ ಅಧ್ಯಕ್ಷತೆ ವಹಿಸಿದ್ದ, ಡಾ.ದಯಾಕರ್
ಇಂದಿನ ಯುವ* ಸಮೂಹವು ಡ್ರಗ್ಸ್ ಮುಂತಾದ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಉತ್ತಮ ಭವಿಷ್ಯವನ್ನು ಕಳೆದು ಕೊಳ್ಳುತ್ತಿದ್ದು ಈ ಬಗ್ಗೆ ಬಾಲ್ಯದಲ್ಲೆ ಮಕ್ಕಳಿಗೆ ಅರಿವು ಮೂಡಿಸುವಕಾರ್ಯವನ್ನು ಯುವಸಂಘ ಮಾಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಕರೆಯಿತ್ತರು.. *ದೀಪ ಪ್ರಜ್ವಲಿಸುವ ಮೂಲಕ ಕಛೇರಿಯ ಶುಭಾರಂಭ ವನ್ನು ಧರ್ಮಸ್ಥಳ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಪವನ್ ನಾಯಕ್ ನೇರವೇರಿ
ಸಿದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಸಹಕಾರಿ ಸಂಘದ ಪ್ರಭಂದಕರಾದ ಮಧುಕರ್ ಶುಭಾ ಹಾರೈಸಿದರು. ಧರ್ಮಸ್ಥಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಕೊರಗಪ್ಪನಾಯ್ಕ ಸರಕಾರದಿಂದ ದೊರೆತ ಕ್ರೀಡಾ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ರವರು ಉಪಸ್ಥಿತಿ ಇದ್ದರು.
ವೇದಿಕೆಯಲ್ಲಿ ಜಯಕೇಸರಿ ಯುವಜನ ಸಂಘದ *ಅದ್ಯಕ್ಷರಾದ ಕುಶಾಲಪ್ಪ* ಮುಚ್ಚಿರಾಲಿ, *ಸಂಘದ* *ಕಾನೂನು ಸಲಹೆಗಾರರು* ಆದ ಬೆಳ್ತ0ಗಡಿಯ ಯುವ ನ್ಯಾಯವಾದಿ ,ಭಾರತೀಯ ಮಜ್ದೂರು ಸಂಘದ ಅಧ್ಯಕ್ಷರಾದ ಉದಯಕುಮಾರ್ ಬಿ ಕೆ ,ತಾಲೂಕು ಯುವ ಸಬಲೀಕರಣ ಕ್ರೀಡಾದಿಕಾರಿಯಾದ ಪ್ರಭಾಕರ್ ನಾರವಿ, ಕ.ರಾ. ರ.ಸಾ.ನಿಗಮದ ಧರ್ಮಸ್ಥಳ ಘಟಕದ ಸಂಚಾರಿ ನಿಯಂತ್ರಕರಾದ ತಿಮ್ಮಪ್ಪರಾಣ್ಯ , ಕಟ್ಟಡದ ಮಾಲೀಕರಾದ ನಾರಾಯಣ ಗೌಡ ಉಂಬಾಜೆ ಉಪಸ್ಥಿತ ರಿದ್ದರು *.ಸರಳ ವಾಗಿ ನಡೆದ ಕಛೇರಿ ಶುಭಾರಂಭ ಕಾರ್ಯಕ್ರಮಕ್ಕೆ ನೆರಿಯ ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯರುಗಳಾದ ಬಾಬುಗೌಡ ಪರ್ಪಲ, ಪಿ.ಕೆ.ರಾಜನ್, ಶ್ರೀಮತಿ ಕುಶಲ,ಶ್ರೀಮತಿ ವಸಂತಿ ಹಾಗೂ ಗ್ರಾಮದ ಹಿರಿಯರಾದ ಪೂವಪ್ಪ ಪೂಜಾರಿ, ರಾಮಣ್ಣ ಗೌಡ ಮುಚ್ಚಿರಾಲಿ,ಮಧುಸೂಧನ ನೆಕ್ಕರೆ, ಸಂದೀಪ್ ಪುಲ್ಲಾಜೆ ಹಾಗೂ ಇತರ ಗಣ್ಯರು ಆಗಮಿಸಿ ಶುಭ ಹಾರೈಸಿದರು* . ಸಂಘದ ಪುಟ್ಟ ಸದಸ್ಯೆಯರ ಪ್ರಾರ್ಥನೆ ಯೊಂದಿಗೆ, *ಜಯಕೇಸರಿ ಯುವಜನ ಸಂಘದ ಸ್ಥಾಪಕರೂ ಹಾಗೂ ಸಂಚಾಲಕರಾದ ವಿ.ಹರೀಶ್ ನೆರಿಯ* ರವರು ಪ್ರಾಸ್ತಾವಿಕವಾಗಿ ಸಂಘದ ವಿಚಾರಗಳನ್ನೂ ಮಂಡಿಸಿ, ಕಾರ್ಯಕ್ರಮವನ್ನು ನಿರ್ವಹಿಸಿ ಅಥಿತಿ ಗಣ್ಯರಿಗೆ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.