HomePage_Banner_
HomePage_Banner_

ಭಾರತೀಯ ಮಜ್ದೂರ್ ಸಂಘದಿಂದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಣೆ

ಗೇರುಕಟ್ಟೆ:  ಭಾರತೀಯ ಮಜ್ದೂರ್ ಸಂಘ ತಾಲುಕು ಸಮಿತಿ ಬೆಳ್ತಂಗಡಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ತಾಲುಕು ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಣಾ ಕಾರ್ಯಕ್ರಮ , ಮಾಹಿತಿ ಕಾರ್ಯಾಗಾರ ಹಾಗೂ ಸಮಾಲೋಚನ ಸಭೆಯು ಅ.23 ರಂದು ಗೇರುಕಟ್ಟೆ ಸಹಕಾರಿ ಭವನದಲ್ಲಿ ನಡೆಯಿತು.


ವಿಧಾನ ಪರಿಷತ್ ಶಾಸಕ   ಪ್ರತಾಪ್ ಸಿಂಹ ನಾಯಕ್ ಫಲಾನುಭವಿಗಳಿಗೆ ಕಾರ್ಮಿಕ ಕಾರ್ಡ್ ವಿತರಿಸಿದರು. ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯದ ಬಗ್ಗೆ  ಜಯರಾಜ್ ಮುಂಡಾಜೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷೆ  ಮಮತಾ  ಎಂ ಶೆಟ್ಟಿ, ಬಂದಾರು ಗ್ರಾ.ಪಂ ಮಾಜಿ ಅಧ್ಯಕ್ಷ ಉದಯ ಕುಮಾರ್ ಬಿ.ಕೆ,  ಕಳಿಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು,  ದಿವಾಕರ ಮೆದಿನ,   ರಾಜೇಶ್ ಪೆರ್ಮುಡ,  ಸುಧಾಕರ ಮಜಲು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.