HomePage_Banner_
HomePage_Banner_

ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ಸಿ.ಕೆ ಚಂದ್ರಕಲಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸಿ.ಕೆ ಚಂದ್ರಕಲಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರ ಸಾಮಾಜಿಕ ಸೇವೆ, ವಿಕಲಚೇತನರಿಗೆ ದೊರೆಯುವ ವಿವಿಧ ಸೌಲಭ್ಯ, ಸಹಕಾರಗಳ ನಿರಂತರ ಶ್ರಮ, ಕಾರ್ಯವೈಖರಿಯನ್ನು ಗುರುತಿಸಿ ರಾಜ್ಯ ಒಕ್ಕೂಟದ ಅಧ್ಯಕ್ಷ ಮಹೇಶ್ ಗೌಡ,ಪ್ರಧಾನ ಕಾರ್ಯದರ್ಶಿ ಮಾದೇಶ ಚಂದ್ರ ರವರು ಈ ಜವಾಬ್ಧಾರಿಯನ್ನು ನೀಡಿರುತ್ತಾರೆ.
ಸಿ.ಕೆ ಚಂದ್ರಕಲಾ ರವರು ಜಿಲ್ಲಾ ವಿಕಲ ಚೇತನರ ಒಕ್ಕೂಟದ ಅಧ್ಯಕ್ಷರಾಗಿ, ಯುವಜನ ಸೇವೆಯಲ್ಲಿ ರಾಷ್ಟ್ರ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ‘ಚುಟುಕು ಶ್ರೀ’ ದಲಿತರ ಕ್ಷೇತ್ರದಲ್ಲಿ ‘ಅಂಬೇಡ್ಕರ್ ಪ್ರಶಸ್ತಿ’ಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಇವರು ದ.ಕ ಜಿ.ಪಂ ಮಾಜಿ ಸದಸ್ಯೆಯಾಗಿ, ಯುವಚೇತನ ಸೇವಾ ಟ್ರಸ್ಟ್ ನ ಉಪಾಧ್ಯಕ್ಷೆಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.