HomePage_Banner_
HomePage_Banner_

ಬಿಎಸ್‌ಪಿ ಪಕ್ಷದ ನೇತೃತ್ವದಲ್ಲಿ ಕಾನ್ಸಿರಾಂ ಪರಿನಿಬ್ಬಾಣ‌ ದಿನ; ಪಕ್ಷಕ್ಕೆ ಸೇರ್ಪಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬಹುಜನ ಸಮಾಜ ಪಾರ್ಟಿಯ  ಸಂಸ್ಥಾಪಕ,  ಅಂತಾರಾಷ್ಟ್ರೀಯ ಮಟ್ಟದ  ರಾಜಕೀಯ ವಿಜ್ಞಾನಿ, ದಾದಾಸಾಹೇಬ್ ಕಾನ್ಸಿರಾಂ ರವರ 14 ನೇ ಪರಿನಿಭ್ಬಾಣ ಕಾರ್ಯಕ್ರಮ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ  ಬಿಎಸ್‌ಪಿ  ದ.ಕ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ದಾಸಪ್ಪ ಎಡಪದವು  ನೆರವೇರಿಸಿ  ಪಕ್ಷದ  ಕಾರ್ಯ ವೈಕರಿ ಬಗ್ಗೆ ಹಾಗೂ ದಾದ ಸಾಹೇಬ್ ಕಾನ್ಸಿರಾಂ  ರವರ ಹೋರಾಟದ  ಬಗ್ಗೆ ಹಾಗು  ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ   ಪಕ್ಷದ ಬೆಂಬಲಿತ ಅಭ್ಯರ್ಥಿಗಳು  ಚುನಾವಣೆಗೆ ಸ್ಪರ್ಧೆ ಮಾಡಿ ಗೆಲ್ಲುವ ಮೂಲಕ ಪಕ್ಷ ವನ್ನು  ಬೂತ್ ಮಟ್ಟದಲ್ಲಿ  ಭದ್ರ ಪಡಿಸಲು ನಾವೆಲ್ಲರೂ  ಕೆಲಸ ಮಾಡಬೇಕು ಎಂದು ಕರೆ  ನೀಡಿದರು.
ವೇದಿಕೆಯಲ್ಲಿ  ಪಕ್ಷದ ಜಿಲ್ಲಾ ಸಂಯೋಜಕ  ನಾರಾಯಣ ಬೋದ್, ಜಿಲ್ಲಾ ಉಸ್ತುವಾರಿ ಗೋಪಲ್ ಮುತ್ತುರು, ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಭೊದ್,‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಜಿಲ್ಲಾ ಖಜಾಂಚಿ ವಿಮಲಾ .ಕೆ,  ಜಿಲ್ಲಾ ಸಹೋದರ ಸಮಿತಿ ಸಂಯೊಜಕ  ರಾಜೀವ್ ಗೌಡ,  ಬೆಳ್ತಂಗಡಿ ಅಸೆಂಬ್ಲಿ ಸಂಯೋಜಕ ಸಂಜೀವ ಬಿ.ಕೆ, ಅಸೆಂಬ್ಲಿ  ಉಸ್ತುವಾರಿ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂಜೀವ ನೀರಾಡಿ, ಅಸೆಂಬ್ಲಿ ಅಧ್ಯಕ್ಷ ಶ್ರೀನಿವಾಸ್  ಪಿ ಯಸ್ ಮೊದಲಾದವರು ಉಪಸ್ಥಿತರಿದ್ದರು.
ಬಹುಜನರ ಸಂಕಲ್ಪ ದಿನದ ಅಂಗವಾಗಿ ಸಮಾಜ ಪರಿವರ್ತನಾ  ಚಳುವಳಿಯಲ್ಲಿ  ತನ್ನನ್ನು ತಾನು  ತೊಡಗಿಸಿಕೊಂಡು  ದಾದಾಸಾಹೇಬ್ ಕಾನ್ಸಿರಾಂ  ಕಟ್ಟಿದ ಭೀಮೆಸ್ಸೆಫ್ ನಲ್ಲಿ ರಾಜ್ಯ ಸಂಯೋಜಕರಾಗಿ   ನಿವೃತ್ತಿ ಹೊಂದಿದರುವ  ಕಾಂತಪ್ಪ ಅಲಂಗಾರ್  ಅವರನ್ನು    ಅಧಿಕೃತವಾಗಿ ಪಕ್ಷದ ಭಾವುಟ
ಹಾಗು  ಶಾಲು ಹೊದಿಸಿ  ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ  ಮೂಲ್ಕಿ ಮೂಡಬಿದಿರೆ,ಮಂಗಳೂರು ಉತ್ತರ,‌  ಬೆಳ್ತಂಗಡಿ  ಇನ್ನಿತರ ಅಸೆಂಬ್ಲಿ ಸಮಿತಿ ಸದಸ್ಯರು ಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು  ಬಿಯಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶಿವಪ್ಪ ಗರ್ಡಾಡಿ ನಿರೂಪಿಸಿ  ,ಬೆಳ್ತಂಗಡಿ ಅಸೆಂಬ್ಲಿ ಅಧ್ಯಕ್ಷ ಪಿ ಯಸ್ ಶ್ರೀನಿವಾಸ್  ಸ್ವಾಗತಿಸಿ, ಬೆಳ್ತಂಗಡಿ ಅಸೆಂಬ್ಲಿ ಸಂಯೋಜಕ  ಸಂಜೀವ ಬಿ.ಕೆ ಅವರ ವಂದನಾರ್ಪನೆಯೋಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.