HomePage_Banner_
HomePage_Banner_

ಅಕ್ರಮ ಮದ್ಯ ಸಾಗಟ.ರಿಕ್ಷಾ ವಶ

                                                                               ಅಕ್ರಮ ಮದ್ಯ ಸಾಗಾಟ: ರಿಕ್ಷಾ ವಶ


ಬೆಳ್ತಂಗಡಿ: ಉಜಿರೆ ಗ್ರಾಮದ ಮಾಲ್ತಡ್ಕ ಎಂಬಲ್ಲಿ ಆಪೆ-ಆಟೋ ರಿಕ್ಷಾವೊಂದನ್ನು ಅಕ್ರಮವಾಗಿ 17.280ಲೀಟರ್ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡಿರುವುದನ್ನು ಪತ್ತೆಹಚ್ಚಲಾಗಿದ್ದು, ಆರೋಪಿ ಹರಿಶ್ಚಂದ್ರ ಡಿ. ಬೆಳಾಲು ಇವರನ್ನು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,07,000/- ಆಗಿರುತ್ತದೆ. ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೌಮ್ಯಲತಾ ಎನ್. ದಾಖಲು ಮಾಡಿರುತ್ತಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಶೈಲಜಾ ಎ. ಕೋಟೆರವರ ನಿರ್ದೇಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ಶೋಭಾ ಕೆ.ರವರ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ವಲಯ ಕಚೇರಿಯ ಸಿಬ್ಬಂದಿಯವರಾದ ಸಯ್ಯದ್ ಶಬೀರ್, ಅಬ್ದುಲ್ ಹಮೀದ್ ಕೆ., ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಹಾಗೂ ವಾಹನ ಚಾಲಕರಾದ ನವೀನ್ ಕುಮಾರ್ ಪಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.