HomePage_Banner_
HomePage_Banner_

ಮದ್ದಡ್ಕ ಧರ್ಮಶ್ರೀ ಸಂಕೀರ್ಣ ವಿಸ್ತೃತ ಕಟ್ಟಡ ಹಾಗೂ ಶ್ರೀ ದುರ್ಗಾ ಟ್ರೇಡರ್ಸ್ ಶುಭಾರಂಭ

ಮದ್ದಡ್ಕ: ಇಲ್ಲಿಯ ಧರ್ಮಶ್ರೀ ಸಂಕೀರ್ಣ ಇದರ ವಿಸ್ತೃತ ಕಟ್ಟಡ ಹಾಗೂ ಶ್ರೀ ದುರ್ಗಾ ಟ್ರೇಡರ್ಸ್ ಇದರ ಪ್ರಾರಂಭೋತ್ಸವ ಅ.19 ರಂದು ಮದ್ದಡ್ಕ ಧರ್ಮಶ್ರೀ ಸಂಕೀರ್ಣದಲ್ಲಿ ಜರುಗಿತು.


ಮೂಡಬಿದ್ರೆಯ ಕರಿಂಜೆ ಶ್ರೀ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ನೂತನ ಸಂಕೀರ್ಣದ ಉದ್ಘಾಟನೆಯನ್ನು ನೆರವೇರಿಸಿ, ಆಶೀರ್ವಚನ ನೀಡಿದರು.


ಮುಖ್ಯ ಅತಿಥಿಗಳಾಗಿ ಮಡಂತ್ಯಾರ್ ಸೇಕ್ರೆಟ್ ಹಾರ್ಟ್ ಚರ್ಚ್ ಧರ್ಮ ಗುರುಗಳಾದ ರೆ| ಫಾ| ಬೇಸಿಲ್ ವಾಸ್, ಮದ್ದಡ್ಕ ನೂರುಲ್ ಹುದಾ ಜಮುಅ ಮಸೀದಿಯ ಎಂ.ಎ ಮಹಮ್ಮದ್ ರಫೀಕ್ ಅಹ್ಸನಿ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ಉಳಿಪ್ಪಾಡಿಗುತ್ತು, ಮಾಜಿ ಶಾಸಕಕೆ.ಪ್ರಭಾಕರ ಬಂಗೇರ, ಬರೋಡ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಮಡಂತ್ಯಾರು ಸೇಕ್ರೆಡ್ ಹಾರ್ಡ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಲೆನ್ಸಿ ಪಿಂಟೊ ಉಪಸ್ಥಿತರಿದ್ದರು

ಶಾಸಕ ಹರೀಶ್ ಪೂಂಜರವರು ಕಾರ್ಯಕ್ರಮಕ್ಕೆ ಮುಂಚಿತವಾಗಿ ಬಂದು ಶುಭ ಹಾರೈಸಿದರು

ಬಂದಂತಹ ಅತಿಥಿ ಗಣ್ಯರನ್ನು ಕಟ್ಟಡ ಮಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ,  ಪತ್ನಿ ಸುಮಾ ಪ್ರಭಾಕರ್ ಶೆಟ್ಟಿ, ಮಕ್ಕಳಾದ ಶುಭ್ರ ಶೆಟ್ಟಿ, ಶಿಪ್ರ ಶೆಟ್ಟಿ, ಸಹೋದರರಾದ ಶ್ರೀಧರ್ ಶೆಟ್ಟಿ, ವಿಠಲ ಶೆಟ್ಟಿ,ರವಿ ಶೆಟ್ಟಿ, ಶೇಖರ ಶೆಟ್ಟಿ, ಶಿವರಾಮ ಶೆಟ್ಟಿ  ಮತ್ತು ಮನೆಯವರು ಸ್ವಾಗತಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.